ತಿರುವನಂತಪುರಂ: ಮಲಯಾಳಂ ಚಿತ್ರ ನಿರ್ದೇಶಕ ರಂಜಿತ್ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಬಂಗಾಳಿ ನಟಿ ಶ್ರೀಲೇಖಾ ಮಿತ್ರಾ ಕೊಚ್ಚಿ ಸೆಮಿನಾರ್‌ನಿಂದ ಹಿಂದೆ ಸರಿದಿದ್ದಾರೆ.
ಶ್ರೀಲೇಖಾ ತನ್ನ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ಆಗಸ್ಟ್ ಹೇಗೆ ಪ್ರಭಾವ ಬೀರಿದೆ ಮತ್ತು ಈ ತಿಂಗಳಿನ ಮಹತ್ವವೇನು ಎಂಬುದನ್ನು ಪ್ರತಿಬಿಂಬಿಸಿದ್ದಾರೆ, ಇದು ವೈಯಕ್ತಿಕ ಮೈಲಿಗಲ್ಲುಗಳು ಮತ್ತು ಸವಾಲುಗಳಿಂದ ತುಂಬಿದ ಸಮಯ ಎಂದು ಬರೆದುಕೊಂಡಿದ್ದಾರೆ.
ಜೀವನದಲ್ಲಿ ವೈಯಕ್ತಿಕ ಆರೋಪಗಳು, ಪ್ರತ್ಯಾರೋಪಗಳು ಮತ್ತು ಮಾಧ್ಯಮಗಳ ಒತ್ತಡ ಈ ತಿಂಗಳಿನಲ್ಲೇ ಹೆಚ್ಚಾಗಿ ಬಂದಿದೆ. ಇದು ನನ್ನ ಯೋಗಕ್ಷೇಮದ ಮೇಲೆ ಗಣನೀಯವಾಗಿ ಪರಿಣಾಮ ಬೀರಿದೆ ಎಂದು ವಿವರಿಸಿದ್ದಾರೆ.
ಈ ತಿಂಗಳನ್ನು ಭಾರಿ ಒತ್ತಡ ಏರ್ಪಟ್ಟಿತ್ತು. ಇದು ಭಾವನಾತ್ಮಕ ಒತ್ತಡದ ಅವಧಿಯಾಗಿತ್ತು. ಇದರಿಂದ ಪಾರಾಗಲು ಸ್ವಯಂ-ಆರೈಕೆಗಾಗಿ ಹಿಮಾಲಯ ಪರ್ವತದತ್ತ ಪಯಣ ಬೆಳೆಸಿ ಮಾನಸಿಕವಾಗಿ ನೆಮ್ಮದಿ ಪಡೆದುಕೊಂಡೆ. ಸಾರ್ವಜನಿಕರ ಕಣ್ಣಿನಿಂದ ದೂರವಿರುವ ವೈಯಕ್ತಿಕ ಸ್ಥಳದ ಅಗತ್ಯವಿತ್ತು. ಹೀಗಾಗಿ ಸೆಮಿನಾರ್‌ಗೆ ಹಾಜರಾಗಲು ಸಾಧ್ಯವಾಗಲಿಲ್ಲ. ಇದಕ್ಕಾಗಿ ಕ್ಷಮೆಯಾಚಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
2009 ರಲ್ಲಿ ಚಲನಚಿತ್ರವೊಂದರಲ್ಲಿ ಪಾತ್ರದ ಚರ್ಚೆಯ ಸಂದರ್ಭದಲ್ಲಿ ಅನುಚಿತ ವರ್ತನೆ ತೋರಿದ ಆರೋಪಹೊರೆಸಿ ರಂಜಿತ್ ವಿರುದ್ಧ ಶ್ರೀಲೇಖಾ ಕೊಚ್ಚಿ ಸಿಟಿ ಪೊಲೀಸರಿಗೆ ದೂರು ನೀಡಿದ್ದರಿಂದ ವಿವಾದ ಪ್ರಾರಂಭವಾಯಿತು.