ಗುವಾಹಟಿ: ಅಸ್ಸಾಂನಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದು, ಗುವಾಹಟಿ ನಗರವನ್ನೊಳಗೊಂಡಿರುವ ಕಾಮರೂಪ ಮೆಟ್ರೊಪಾಲಿಟನ್ ಜಿಲ್ಲೆಯ ಶಾಲೆಗಳಿಗೆ ನಾಲ್ಕು ದಿನ ರಜೆ ಘೋಷಿಸಲಾಗಿದೆ.
ಗುವಾಹಟಿ: ಅಸ್ಸಾಂನಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದು, ಗುವಾಹಟಿ ನಗರವನ್ನೊಳಗೊಂಡಿರುವ ಕಾಮರೂಪ ಮೆಟ್ರೊಪಾಲಿಟನ್ ಜಿಲ್ಲೆಯ ಶಾಲೆಗಳಿಗೆ ನಾಲ್ಕು ದಿನ ರಜೆ ಘೋಷಿಸಲಾಗಿದೆ.
ಗುವಾಹಟಿಯಲ್ಲಿ ಭಾನುವಾರ 37.9 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಇದು ಇಲ್ಲಿ ದಾಖಲಾಗುವ ಸಾಮಾನ್ಯ ತಾಪಮಾನಕ್ಕಿಂತ 5.9 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ.
ಈ ಬಗ್ಗೆ ಜಿಲ್ಲಾ ಪ್ರಾಥಮಿಕ ಶಿಕ್ಷಣ ಅಧಿಕಾರಿಗಳು(ಡಿಇಇಒ) ಸೋಮವಾರ ಸುತ್ತೋಲೆ ಹೊರಡಿಸಿದ್ದು, ಜಿಲ್ಲಾ ವ್ಯಾಪ್ತಿಯ ಎಲ್ಲ ಶಾಲೆಗಳನ್ನು ಮಂಗಳವಾರದಿಂದ ನಾಲ್ಕು ದಿನ ರಜೆ ನೀಡಬೇಕು ಎಂದು ಆದೇಶಿದ್ದಾರೆ. ತೀವ್ರ ಬಿಸಿಲಿನ ತಾಪಮಾನದಿಂದ ಮಕ್ಕಳ ಆರೋಗ್ಯದ ಮೇಲೆ ಸಂಭವಿಸಬಹುದಾದ ದುಷ್ಪರಿಣಾಮಗಳನ್ನು ತಡೆಗಟ್ಟಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಡಿಇಇಒ ತಿಳಸಿದ್ದಾರೆ.