ಪೆರ್ಲ: ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕ ಹಾಗೂ ನಾಲಂದ ಚಾರಿಟೇಬಲ್ ಟ್ರಸ್ಟ್ ಜಂಟಿ ಆಶ್ರಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆ ಹಾಗು ಸ್ವಚ್ಛತಾ ಹಿ ಸೇವಾ ಸಪ್ತಾಹ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮ ನಿನ್ನೆ ನಡೆಯಿತು.
ಪ್ರಾಂಶುಪಾಲ ಶಂಕರ ಖಂಡಿಗೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಾತ್ಮಾ ಗಾಂಧೀಜಿ ಅವರ ಕನಸಿನಂತೆ ಸ್ಪಚ್ಚ ಭಾರತ ನಿರ್ಮಾಣ ನಮ್ಮ ಕೈಯಲ್ಲಿದೆ. ನಾವು ನಮ್ಮ ಸುತ್ತ ಮುತ್ತಲಿನ ಪರಿಸರ ಶುಚಿಗೊಳಿಸಿದರೆ ಹಾಗೂ ನಮ್ಮಂತೆಯೆ ಎಲ್ಲರೂ ಯೋಚಿಸಿದರೆ ನಮ್ಮ ದೇಶ ಸ್ವಚ್ಛ ಭಾರತವಾಗಬಹುದು ಎಂದರು.
ಸ್ವಯಂ ಸೇವಕಿ ಅನಘ ಸ್ವಾಗತಿಸಿ, ಮೇಘ ವಂದಿಸಿದರು. ಶ್ರೀಲಕ್ಷ್ಮಿ ನಿರೂಪಿಸಿದರು. ಮಲಯಾಳಂ ವಿಭಾಗದ ಸಹಾಯಕ ಪ್ರಾಧ್ಯಾಪಕಿ ವಿನೀಶ, ಸ್ವಯಂ ಸೇವಕರು ಉಪಸ್ಥಿತರಿದ್ದರು. ಕಾಲೇಜು ಪರಿಸರವನ್ನು ಶುಚಿಗೊಳಿಸಲಾಯಿತು. ಎನ್ನೆಸ್ಸೆಸ್ ಯೋಜನಾಧಿಕಾರಿ ವರ್ಷಿತ್ ಸಂಯೋಜಿಸಿದ್ದರು.