ಕಾಸರಗೋಡು: ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಪಕ್ಷದ ರಾಜ್ಯ ಸಮಿತಿ ಅಧ್ಯಕ್ಷ ಕೆ. ಸುರೇಂದ್ರನ್ ಕಾಸರಗೋಡಿನಲ್ಲಿ ಚಾಲನೆ ನೀಡಿದರು. ಕಾಸರಗೋಡು ನಗರಸಭೆಯ 32ನೇ ವಾರ್ಡು ವ್ಯಾಪ್ತಿಯ ಡಾ. ಕೆ.ಎನ್ ವೆಂಕಟ್ರಮಣ ಹೊಳ್ಳ ಹಗೂ ರಾಮಕೃಷ್ಣ ಹೊಳ್ಳ ಅವರ ನಿವಾಸ 'ಸಪ್ತಗಿರಿ'ಯಲ್ಲಿ ಸದಸ್ಯತ್ವ ಅಭಿಯಾನ ಉದ್ಘಾಟಿಸಲಾಯಿತು.
ಇದೇ ಸಂದರ್ಭ ಪಂಡಿತ್ ದೀನ್‍ದಯಾಳ್ ಉಪಾಧ್ಯಾಯ ಸಂಸ್ಮರಣೆ ನಡೆಯಿತು. ಕೆ. ಸುರೇಂದ್ರನ್ ಅವರು ದೀನ್‍ದಯಾಳ್ ಉಪಾಧ್ಯಾಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಿದರು. ಈ ಸಂದರ್ಭ ನಿವೃತ್ತ ಡಿವೈಎಸ್‍ಪಿ ಕೆ.ಪಿ ಮೋಹನ್‍ದಾಸ್ ಹಾಗೂ ಕನ್ನಡ ಭವನ ಸಂಸ್ಥಾಪಕ ಕೆ. ವಾಮನ ರಾವ್ ಬೇಕಲ್ ಅವರಿಗೆ ಬಿಜೆಪಿಯ ನೂತನ ಸದಸ್ಯತ್ವ ನೀಡುವ ಮೂಲಕ ಅಭಿಯಾನ ಉದ್ಘಾಟಿಸಲಾಯಿತು. ಪಕ್ಷದ ರಾಜ್ಯ ಸಮಿತಿ ಸದಸ್ಯೆ ಸವಿತಾ ಟೀಚರ್, ಜಿಲ್ಲಾ ಉಪಾಧ್ಯಕ್ಷ ಎಂ. ಸುಧಾಮ ಗೋಸಾಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ರೈ, ಜಿಲ್ಲಾ ಕಾರ್ಯದರ್ಶಿ ಮನುಲಾಲ್ ಮೇಲತ್, ಕಾಸರಗೋಡು ಮಂಡಲ ಸಮಿತಿ ಪದಾಧಿಕಾರಿಗಳಾದ ಕೆ. ಗುರುಪ್ರಸಾದ್ ಪ್ರಭು, ಸುಕುಮಾರ ಕುದ್ರೆಪ್ಪಾಡಿ, ಪ್ರೇಮ್‍ಜಿತ್, ನಗರಸಭಾ ಸದಸ್ಯರಾದ ಶ್ರೀಲತಾ ಟೀಚರ್, ಅಶ್ವಿನಿ ಬೀರಂತಬೈಲ್, ಕಿಶೋರ್ ಕುಮಾರ್, ಅರುಣ್‍ಕುಮಾರ್ ಶೆಟ್ಟಿ, ಪುರಂದರ ಶೆಟ್ಟಿ, ಪ್ರೇಮಾಪುರಂದರ, ಅರುಣಾ ರಾಮಕೃಷ್ಣ ಹೊಳ್ಳ ಹಾಗೂ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಈ ಸಂದರ್ಭ ನಗರಸಭಾ ವ್ಯಾಪ್ತಿಯ 153ನೇ ಬೂತಿನ ವಿವಿಧ ಮನೆಗಳಿಗೆ ತೆರಳಿ ಸದಸ್ಯತ್ವ ಅಭಿಯಾನ ನಡೆಸಲಾಯಿತು.