ನವದೆಹಲಿ: 'ಸೂಕ್ಷ್ಮ ಸಂಗತಿ'ಗಳ ಕಾರಣದಿಂದ ಕೊಲಿಜಿಯಂನ ಶಿಫಾರಸು ಅನುಷ್ಠಾನದಲ್ಲಿ ವಿಳಂಬವಾಗುತ್ತಿದೆ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟಿಗೆ ತಿಳಿಸಿದೆ.
ನವದೆಹಲಿ: 'ಸೂಕ್ಷ್ಮ ಸಂಗತಿ'ಗಳ ಕಾರಣದಿಂದ ಕೊಲಿಜಿಯಂನ ಶಿಫಾರಸು ಅನುಷ್ಠಾನದಲ್ಲಿ ವಿಳಂಬವಾಗುತ್ತಿದೆ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟಿಗೆ ತಿಳಿಸಿದೆ.
ಈ ವಿಷಯಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವುದು ಸಂಸ್ಥೆಯ ಹಿತಾಸಕ್ತಿ ಅಥವಾ ಸಂಬಂಧಿಸಿದ ನ್ಯಾಯಮೂರ್ತಿಗಳ ಹಿತಾಸಕ್ತಿಗೆ ಒಳಪಡುವುದಿಲ್ಲ ಎಂದು ಅಟಾರ್ನಿ ಜನರಲ್ ಆರ್.
'ಕೇಂದ್ರ ಸರ್ಕಾರವು ತಿಳಿಸಿರುವ ಸೂಕ್ಷ್ಮ ಸಂಗತಿಗಳು ಹಾಗೂ ನನ್ನ ಸಲಹೆಗಳನ್ನು ನ್ಯಾಯಮೂರ್ತಿಗಳ ಅವಗಾಹನೆಗಾಗಿ ಮುಚ್ಚಿದ ಲಕೋಟೆಯಲ್ಲಿ ನ್ಯಾಯಪೀಠಕ್ಕೆ ಸಲ್ಲಿಸುವೆ' ಎಂದು ಅವರು ಹೇಳಿದರು.
ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ನೇಮಕಾತಿಗೆ ಸಂಬಂಧಿಸಿದಂತೆ ಕೊಲಿಜಿಯಂನ ಶಿಫಾರಸಿಗೆ ಕಾಲಮಿತಿ ನಿಗದಿಪಡಿಸುವ ನಿರ್ದೇಶನ ನೀಡಬೇಕು ಎಂದು ಕೋರಿ ವಕೀಲ ಹರ್ಷ ವಿಭೋರ್ ಸಿಂಘಾಲ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿದೆ. ಸೆ. 20ರಂದು ಈ ಅರ್ಜಿಯು ವಿಚಾರಣೆಗೆ ನಿಗದಿಯಾಗಿದೆ.