ಕೊಚ್ಚಿ: ಬೇರೆ ರಾಜ್ಯಗಳಿಂದ ಆನೆಗಳನ್ನು ತರುವುದನ್ನು ಹೈಕೋರ್ಟ್ ತಾತ್ಕಾಲಿಕವಾಗಿ ತಡೆಹಿಡಿದಿದೆ. ವಿಭಾಗೀಯ ಪೀಠ ಈ ತಡೆಯಾಜ್ಞೆ ನೀಡಿದೆ.
ಸೆರೆ ಸಿಕ್ಕ ಆನೆಗಳ ವರ್ಗಾವಣೆಗೆ ಸಂಬಂಧಿಸಿದ ನಿಯಮಗಳ ಅನುಸಾರವೇ ಮಧ್ಯಂತರ ಆದೇಶ ನೀಡಲಾಗಿದೆ. ಪ್ರಾಣಿ ಸಂರಕ್ಷಣಾ ಸಂಸ್ಥೆ ಸಲ್ಲಿಸಿದ್ದ ಅರ್ಜಿಯಲ್ಲಿ ಹೈಕೋರ್ಟ್ ಮಧ್ಯಪ್ರವೇಶಿಸಿ |ಈ ಆದೇಶ ನೀಡಿದೆ.
ಇತರೆ ರಾಜ್ಯಗಳಿಂದ ಆನೆಗಳನ್ನು ಸ್ಥಳಾಂತರಿಸಲು ಅನುಮತಿ ನೀಡದಂತೆ ಸರ್ಕಾರ ಮತ್ತು ಮುಖ್ಯ ವನ್ಯಜೀವಿ ವಾರ್ಡನ್‍ಗೆ ಹೈಕೋರ್ಟ್ ತಾತ್ಕಾಲಿಕವಾಗಿ ನಿಷೇಧ ಹೇರಿದೆ. ಕಳೆದ ಆರು ವರ್ಷಗಳಲ್ಲಿ ಇಂತಹ ಆನೆಗಳ ಸಂಖ್ಯೆ 154 ಎಂದು ನ್ಯಾಯಾಲಯ ಹೇಳಿದೆ.