ಜೆರುಸಲೇಂ: ವೆಸ್ಟ್ ಬ್ಯಾಂಕ್‌ನ ಬೈಟ್ ಎಲ್ ಸೆಟಲ್‌ಮೆಂಟ್ ಸಮೀಪ ವಾಹನ ನುಗ್ಗಿಸಿ ನಡೆಸಿದ ದಾಳಿಯಲ್ಲಿ ಬೆನೈ ಮನಾಶೆ ಸಮುದಾಯಕ್ಕೆ ಸೇರಿದ ಭಾರತ ಮೂಲದ ಇಸ್ರೇಲ್ ಯೋಧ ಮೃತಪಟ್ಟಿದ್ದಾರೆ ಎಂದು ಸಮುದಾಯದ ಸದಸ್ಯರು ತಿಳಿಸಿದ್ದಾರೆ.
ಜೆರುಸಲೇಂ: ವೆಸ್ಟ್ ಬ್ಯಾಂಕ್‌ನ ಬೈಟ್ ಎಲ್ ಸೆಟಲ್‌ಮೆಂಟ್ ಸಮೀಪ ವಾಹನ ನುಗ್ಗಿಸಿ ನಡೆಸಿದ ದಾಳಿಯಲ್ಲಿ ಬೆನೈ ಮನಾಶೆ ಸಮುದಾಯಕ್ಕೆ ಸೇರಿದ ಭಾರತ ಮೂಲದ ಇಸ್ರೇಲ್ ಯೋಧ ಮೃತಪಟ್ಟಿದ್ದಾರೆ ಎಂದು ಸಮುದಾಯದ ಸದಸ್ಯರು ತಿಳಿಸಿದ್ದಾರೆ.
ಮೃತ ಯೋಧ ಗೆರಿ ಗಿಡಿಯಾನ್ ಹಂಗಲ್(24) ನೋಫ್ ಹಗಲಿಲ್‌ನ ನಿವಾಸಿಯಾಗಿದ್ದು, ಕೆಫಿರ್ ಬ್ರಿಗೇಡ್ ನಹ್ಶೋನ್ ಬೆಟಾಲಿಯನ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು ಎಂದು ಇಸ್ರೇಲಿ ಸೇನೆ ತಿಳಿಸಿದೆ.
ಪ್ಯಾಲೇಸ್ಟಿನ್ ಪರವಾನಗಿ ಹೊಂದಿರುವ ಟ್ರಕ್‌ವೊಂದು ಬಸ್ ನಿಲ್ದಾಣದ ಪಕ್ಕದಲ್ಲಿರುವ ಇಸ್ರೇಲ್ ರಕ್ಷಣಾ ಪಡೆಯ(ಐಡಿಎಫ್) ಭದ್ರತಾ ಪೋಸ್ಟ್‌ಗೆ ಭಾರಿ ವೇಗದಲ್ಲಿ ನುಗ್ಗಿ ದಾಳಿ ನಡೆಸಿರುವುದು ದೃಶ್ಯಗಳಲ್ಲಿ ಸೆರೆಯಾಗಿದೆ. ಈ ದಾಳಿಯಲ್ಲಿ ಯೋಧ ಹಂಗಲ್ ಮೃತಪಟ್ಟಿದ್ದಾರೆ.
'ಯುವ ಯೋಧನ ಮರಣದ ಸುದ್ದಿ ಕೇಳಿ ಆಘಾತವಾಯಿತು' ಎಂದು ಪಿಟಿಐ ಸುದ್ದಿಸಂಸ್ಥೆಗೆ ಸಮುದಾಯದ ಸದಸ್ಯರು ತಿಳಿಸಿದ್ದಾರೆ.
ದಾಳಿ ನಡೆಸಿದ ಶಂಕಿತ ಸೆಂಟ್ರಲ್ ವೆಸ್ಟ್ ಬ್ಯಾಂಕ್‌ನ ರಫತ್ ನಗರದ ನಿವಾಸಿ ಹೈಲ್ ಧೈಫಲ್ಲಾ(58) ಎಂದು ಇಸ್ರೇಲ್ ಸೇನೆ ತಿಳಿಸಿದೆ.
2020ರಲ್ಲಿ ಭಾರತದ ಈಶಾನ್ಯ ಭಾಗದಿಂದ ಇಸ್ರೇಲ್‌ಗೆ ಹಂಗಲ್ ಕುಟುಂಬ ವಲಸೆ ಬಂದಿತ್ತು. ಇಂದು ಹಂಗಲ್ ಅಂತ್ಯಕ್ರಿಯೆ ನಡೆಯಲಿದೆ ಎಂದು ಸಮುದಾಯದ ಸದಸ್ಯರು ತಿಳಿಸಿದ್ದಾರೆ.
ಬೆನೈ ಮನಾಶೆ ಸಮುದಾಯದ ಸುಮಾರು 300 ಯುವಕರು ಇಸ್ರೇಲ್ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಲಾಗಿದೆ.