ಅಂಕೋಲಾ: ತಾಲೂಕಿನ ಶಿರೂರು ಗುಡ್ಡ ಕುಸಿತ ಸ್ಥಳದಲ್ಲಿ ಮೂರನೇ ಹಂತದ ಕಾರ್ಯಾಚರಣೆ ನಡೆಯುತ್ತಿರುವ ಸಂದರ್ಭದಲ್ಲಿ ನಾಪತ್ತೆಯಾಗಿದ್ದ ಕೇರಳದ ಅರ್ಜುನನ ಲಾರಿ ಶನಿವಾರ ಮಧ್ಯಾಹ್ನ (ಸೆ.21) ಪತ್ತೆಯಾಗಿದೆ.
ಅಂಕೋಲಾ: ತಾಲೂಕಿನ ಶಿರೂರು ಗುಡ್ಡ ಕುಸಿತ ಸ್ಥಳದಲ್ಲಿ ಮೂರನೇ ಹಂತದ ಕಾರ್ಯಾಚರಣೆ ನಡೆಯುತ್ತಿರುವ ಸಂದರ್ಭದಲ್ಲಿ ನಾಪತ್ತೆಯಾಗಿದ್ದ ಕೇರಳದ ಅರ್ಜುನನ ಲಾರಿ ಶನಿವಾರ ಮಧ್ಯಾಹ್ನ (ಸೆ.21) ಪತ್ತೆಯಾಗಿದೆ.
ಜುಲೈ 16ರಂದು ನಡೆದಿದ್ದ ಗುಡ್ಡಕುಸಿತ ದುರಂತದಲ್ಲಿ ಕೇರಳ ಮೂಲದ ಲಾರಿ ನಾಪತ್ತೆಯಾಗಿತ್ತು. ಲಾರಿಯಲ್ಲಿದ್ದ ಚಾಲಕ ಅರ್ಜುನ ಸಹ ನಾಪತ್ತೆಯಾಗಿದ್ದರು. ಆ ವೇಳೆ ಹಲವು ತಂಡಗಳಿಂದ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ ತೀವ್ರ ನೀರಿನ ಸೆಳೆತದ ಕಾರಣದಿಂದ ಅಡ್ಡಿಯಾಗಿತ್ತು.
ಗುಡ್ಡ ಕುಸಿತದ ಕಾರಣದಿಂದ ಹೆದ್ದಾರಿ ಬದಲಿಯಲ್ಲಿದ್ದ ಹೋಟೆಲ್ ಸಮೇತ ಲಾರಿಯೂ ಗಂಗಾವಳಿ ನದಿ ಪಾಲಾಗಿತ್ತು. ಎನ್‌ಡಿಆರ್‌ಎಫ್ ತಂಡ ಡ್ರೋನ್ ಮೂಲಕ ಸ್ಕ್ಯಾನಿಂಗ್ ನಡೆಸಿದ್ದು, ನದಿಯಲ್ಲಿ ಸ್ಕ್ಯಾನಿಂಗ್ ಮೂಲಕ ಲಾರಿ ಇರುವ ಸ್ಥಳ ಗುರುತು ಮಾಡಿತ್ತು. ಆದರೆ ಡೈವಿಂಗ್ ಮಾಡಿ ಲಾರಿಯನ್ನು ಪರಿಶೀಲಿಸಲು ನದಿಯ ಹರಿವು ಅಡ್ಡಿಯಾಗಿತ್ತು.