ಕಾಸರಗೋಡು : ನಗರದ ಪ್ರೆಸ್‍ಕ್ಲಬ್ ಜಂಕ್ಷನ್‍ನ ಮುಖ್ಯರಸ್ತೆಯಲ್ಲಿ ಕಾರ್ಯಾಚರಿಸುತ್ತಿದ್ದ ಹತ್ತರಷ್ಟು ಫಾಸ್ಟ್‍ಫುಡ್ ರೆಸ್ಟೋರೆಂಟ್‍ಗಳ ಸಾವಯವ ತ್ಯಾಜ್ಯವನ್ನು ಸಾರ್ವಜನಿಕ ಸ್ಥಳದಲ್ಲಿ ಸುರಿದು ದುರ್ವಾಸನೆಗೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾ ಎನ್‍ಫೋರ್ಸ್‍ಮೆಂಟ್ ಸ್ಕ್ವೇಡ್ ಅಂಗಡಿ ಮಾಲಿಕರಿಗೆ 15ಸಾವಿರ ರೂ. ದಂಡ ವೀಧಿಸಿದೆ.
ಫಾಸ್ಟ್‍ಫುಡ್ ಅಂಗಡಿಗಳಿಂದ ಹೊರಬೀಳುವ ಸಾವಯವ ತ್ಯಾಜ್ಯವನ್ನು ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಿಸಲು ಅಗತ್ಯ ಕ್ರಮ ಕೈಗೊಳ್ಳುವುದರ ಜತೆಗೆ ಪರಿಸರವನ್ನು ಶುಚಿಯಾಗಿರಿಸಿಕೊಳ್ಳುವಂತೆ ಮಲಿಕರಿಗೆ ಸೂಚಿಸಲಾಯಿತು. ಈ ಬಗ್ಗೆ ಹೆಚ್ಚಿನ ತಪಾಸಣೆ ನಡೆಸುವಂತೆಯೂ ಆರೋಗ್ಯ ಇಲಾಖೆಗೆ ಸೂಚಿಸಲಾಯಿತು.
ಇನ್ನೊಂದು ಪ್ರಕರಣದಲ್ಲಿ ಸನಿಹದ ಕಾಂಪ್ಲೆಕ್ಸ್ ಒಂದರಲ್ಲಿ ಕಸ ಸುಡುತ್ತಿದ್ದ ಕಟ್ಟಡ ಮಾಲೀಕರಿಗೆ 5000ರೂ. ದಂಡ ವಿಧಿಸಿದ್ದಾರೆ. ಇನ್ನೊಂದೆಡೆ ರಸ್ತೆಬದಿಯಲ್ಲಿ ಕಸ ಎಸೆಯುವವರ ಪತ್ತೆಗೆ ಜಿಲ್ಲಾ ಎನ್‍ಫೋರ್ಸ್‍ಮೆಂಟ್ ಅಧಿಕಾರಿಗಳು ಕಾರ್ಯಾಚರಣೆ ಚುರುಕುಗೊಳಿಸಿದೆ.