ಪೆರ್ಲ: ಕುಂಬಳೆ ಉಪಜಿಲ್ಲಾ 63ನೇ ಶಾಲಾ ಕಲೋತ್ಸವ ಈ ಬಾರಿ ಶೇಣಿ ಶ್ರೀಶಾರದಾಂಬ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನವೆಂಬರ್ 8ರಿಂಆ 14ರ ತನಕ ಜರಗಲಿದ್ದು ಇದರ ಯಶಸ್ವಿಗಾಗಿ ಸ್ವಾಗತ ಸಮಿತಿ ರೂPiಕರಣ ಸಭೆ ಶಾಲೆಯಲ್ಲಿ ಜರಗಿತು.
ಸಭೆಯನ್ನು ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಉದ್ಘಾಟಿಸಿದರು. ಶೇಣಿ ಶಾಲಾ ಪ್ರಬಂಧಕಿ ಶಾರದ ವೈ ಅಧ್ಯಕ್ಷತೆ ವಹಿಸಿದ್ದರು. ಪುತ್ತಿಗೆ ಗ್ರಾ.ಪಂ.ಅಧ್ಯಕ್ಷ ಡಿ.ಸುಬ್ಬಣ್ಣ ಆಳ್ವ, ಜಿ.ಪಂ.ಸದಸ್ಯ ನಾರಾಯಣ ನಾಯ್ಕ್, ಎಣ್ಮಕಜೆ ಗ್ರಾ.ಪಂ.ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಕುಲಾಲ್, ಪುತ್ತಿಗೆ ಗ್ರಾ.ಪಂ.ಸದಸ್ಯರಾದ ಆಸೀಫ್ ಆಲಿ, ಕೇಶವ, ಕುಂಬಳೆ ಬಿಪಿಸಿ ಜಯರಾಮ, ಡಯಡ್ ವಿಭಾಗದ ಅನಿಲ್ ಮಣಿಯಮ್ಮ, ಎಚ್ ಎಂ ಫಾರಂ ಕನ್ವೀನರ್ ವಿಷ್ಣುಪಾಲ್, ಶಾಲಾ ಮುಖ್ಯೋಪಾಧ್ಯಾಯ ರಾಧಾಕೃಷ್ಣ ನಾಯಕ್ ಶೇಣಿ ಮೊದಲಾದವರು ಮಾತನಾಡಿದರು.
ಹೈಸ್ಕೂಲ್ ಮುಖ್ಯೋಪಾಧ್ಯಾಯ ಶ್ರೀಶ ಕುಮಾರ್ ಎಂ.ಪಿ ಸ್ವಾಗತ ಸಮಿತಿಯ ಘೋಷಣೆ ನಡೆಸಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರುಗಳಾದ ವಿಲ್ಸನ್ ಡಿಸೋಜ, ಅಬುಬ್ಬಕ್ಕರ್ ಪೆರ್ದನೆ, ಪುಷ್ಪಾ, ಉಮ್ಮರ್ ಕಂಗಿನಮೂಲೆ,ನಿವೃತ್ತ ಮುಖ್ಯೋಪಾಧ್ಯಾಯ ರವೀಂದ್ರನಾಥ ನಾಯಕ್ ಶೇಣಿ ಸಭೆಯಲ್ಲಿ ಉಪಸ್ಥಿತರಿದ್ದರು. ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಶಶಿಧರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೂರ್ಣಿಮ, ಸುರೇಖ ಪ್ರಾರ್ಥನೆ ಹಾಡಿದರು. ಹೈಯರ್ ಸೆಕೆಂಡರಿ ಶಾಲಾ ಪ್ರಾಂಶುಪಾಲ ಶಾಸ್ತಾ ಕುಮಾರ ಎ. ಸ್ವಾಗತಿಸಿ ಸುಜೀತ ಟೀಚರ್ ವಂದಿಸಿದರು.