ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಸಾವಿರಾರು ವಿಡಿಯೋಗಳು ಅಪ್ಲೋಡ್ ಆಗುತ್ತಿರುತ್ತವೆ. ಆದರೆ, ಕೆಲವೊಂದು ವಿಡಿಯೋಗಳು ತನ್ನ ವಿಶೇಷತೆಯಿಂದಲೇ ಸಿಕ್ಕಾಪಟ್ಟೆ ವೈರಲ್ ಆಗಿಬಿಡುತ್ತವೆ. ಇದೀಗ ಅಂಥದ್ದೇ ವಿಡಿಯೋವೊಂದು ಎಲ್ಲರ ಗಮನ ಸೆಳೆದಿದೆ.
ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಸಾವಿರಾರು ವಿಡಿಯೋಗಳು ಅಪ್ಲೋಡ್ ಆಗುತ್ತಿರುತ್ತವೆ. ಆದರೆ, ಕೆಲವೊಂದು ವಿಡಿಯೋಗಳು ತನ್ನ ವಿಶೇಷತೆಯಿಂದಲೇ ಸಿಕ್ಕಾಪಟ್ಟೆ ವೈರಲ್ ಆಗಿಬಿಡುತ್ತವೆ. ಇದೀಗ ಅಂಥದ್ದೇ ವಿಡಿಯೋವೊಂದು ಎಲ್ಲರ ಗಮನ ಸೆಳೆದಿದೆ.
ಸಾಮಾನ್ಯವಾಗಿ ಕ್ಲಾಸ್ರೂಮ್ನಲ್ಲಿ ನಿದ್ರೆಗೆ ಜಾರಿದರೆ ಶಿಕ್ಷಕರು ಅಥವಾ ಪ್ರಾಧ್ಯಪಕರ ಕೋಪಕ್ಕೆ ಗುರಿಯಾಗಬೇಕಾಗುತ್ತದೆ.
ಉಪನ್ಯಾಸದ ಅವಧಿಯ ನಡುವೆ ಪ್ರಾಧ್ಯಪಕ ವಿದ್ಯಾರ್ಥಿಗಳಿಗೆ ಮಲಗಲು ಅವಕಾಶ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಮೊದಲು maardaalapsych ಹೆಸರಿನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ಕೆಲವು ವಿದ್ಯಾರ್ಥಿಗಳು ವ್ಯಾಕರಣಕ್ಕೆ ಸಂಬಂಧಿಸಿದ ಪ್ರಶ್ನೆಯನ್ನು ಚರ್ಚಿಸುವುದರೊಂದಿಗೆ ವಿಡಿಯೋ ಪ್ರಾರಂಭವಾಗುತ್ತದೆ. ಚರ್ಚೆಯನ್ನು ಪ್ರಾಧ್ಯಾಪಕರು ಗಮನಿಸಿದಾಗ, ಓರ್ವ ವಿದ್ಯಾರ್ಥಿ 'ನೀವು ನಿದ್ರೆ ಮಾಡಿ' ಅಥವಾ 'ನೀವು ಮಲಗಬಹುದು' ಇವರೆಡಲ್ಲಿ ಯಾವುದು ಸರಿಯಾದ ವಾಕ್ಯ ಎಂದು ಕೇಳುತ್ತಾರೆ.
ಈ ಪ್ರಶ್ನೆಗೆ ನಗುತ್ತಲೇ ಉತ್ತರ ನೀಡುವ ಪ್ರಾಧ್ಯಪಕ ನೀವು ಮಲಗಬಹುದು ಎನ್ನುತ್ತಾರೆ. ಪ್ರಾಧ್ಯಪಕರು ಈ ಮಾತನ್ನು ಹೇಳುತ್ತಿದ್ದಂತೆ ಎಲ್ಲ ವಿದ್ಯಾರ್ಥಿಗಳು ಅನುಮತಿ ಸಿಕ್ಕಿತು ಎಂಬಂತೆ ತಮ್ಮ ಡೆಸ್ಕ್ಗೆ ಒರಗಿ ನಿದ್ರೆ ಮಾಡಿದಂತೆ ನಟಿಸುತ್ತಾರೆ. ಇದನ್ನು ನೋಡಿ ಪ್ರಾಧ್ಯಪಕರು ನಗುತ್ತಾರೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ವಿಡಿಯೋಗೆ ಸ್ನೇಹಮಯ ಪ್ರಾಧ್ಯಪಕ ಎಂದು ಅಡಿಬರಹ ನೀಡಲಾಗಿದೆ. ವಿಡಿಯೋ ನೋಡಿದವರು ನಮಗೆ ಇಂಥಾ ಪ್ರಾಧ್ಯಪಕರು ಇರಬೇಕಿತ್ತು. ಎಷ್ಟೊಂದು ಸ್ನೇಹಮಯಿಯಾಗಿದ್ದಾರೆ ಎಂದು ಮೆಚ್ಚುಗೆ ಮಹಾಪೂರವನ್ನೇ ಹರಿಸಿದ್ದಾರೆ.