HEALTH TIPS

ಭಾರತದಲ್ಲಿ ಊಟ ಬೇರೆ ದೇಶದಲ್ಲಿ ನಿದ್ರೆ! ಹಲವು ವಿಶೇಷತೆಗಳನ್ನು ಹೊಂದಿದೆ ಈ ಗ್ರಾಮ

Top Post Ad

Click to join Samarasasudhi Official Whatsapp Group

Qries

 ಜಗತ್ತಿನ ಅತಿದೊಡ್ಡ ಜನಸಂಖ್ಯಾ ದೇಶ ಎನಿಸಿಕೊಂಡಿರುವ ಭಾರತ ಹಲವು ದೇಶಗಳೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿರುವುದು ಎಲ್ಲರಿಗೂ ತಿಳಿದೇ ಇದೆ. ಚೀನಾ, ಭೂತಾನ್, ನೇಪಾಳ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ ದೇಶಗಳೊಂದಿಗೆ ಭೂ ಗಡಿಯನ್ನು ಹಂಚಿಕೊಂಡಿದ್ದು, ಈ ಗಡಿ ಭಾಗದ ಹಳ್ಳಿಗಳ ಜೀವನ ತುಂಬಾ ವಿಭಿನ್ನವಾಗಿದೆ.

ಅಂತಹ ಗ್ರಾಮವೊಂದರ ಬಗ್ಗೆ ನಾವೀಗ ತಿಳಿದುಕೊಳ್ಳೋಣ.

ನಾಗಲ್ಯಾಂಡ್​ನ ಮೋನ್​ ಜಿಲ್ಲೆಯ ದೊಡ್ಡ ಗ್ರಾಮಗಳಲ್ಲಿ ಒಂದಾದ 'ಲಾಂಗ್ವಾ' ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಈ ಗ್ರಾಮ ಭಾರತ ಮತ್ತು ಮ್ಯಾನ್ಮರ್​ ನಡುವೆ ನೆಲೆಸಿದೆ. ಇದು ಎರಡೂ ದೇಶಗಳ ಗಡಿಯನ್ನು ಹಂಚಿಕೊಂಡಿದೆ. ಇಲ್ಲಿ ವಾಸಿಸುವವರು ಒಂದು ದೇಶದಲ್ಲಿ ತಿನ್ನುತ್ತಾರೆ ಮತ್ತು ಇನ್ನೊಂದು ದೇಶದಲ್ಲಿ ಮಲಗುತ್ತಾರೆ. ಏಕೆಂದರೆ ಅವರ ಮನೆಗಳು ಮತ್ತು ಹೊಲಗಳು ಎರಡು ದೇಶಗಳ ನಡುವೆ ಹಂಚಿಹೋಗಿವೆ.

ಈ ಲಾಂಗ್ವಾ ಗ್ರಾಮದ ಮೂಲಕ ಅಂತಾರಾಷ್ಟ್ರೀಯ ಗಡಿ ಹಾದು ಹೋಗಿದೆ. ಈ ಗ್ರಾಮದ ಮುಖ್ಯಸ್ಥನ ಮನೆ ಸೇರಿದಂತೆ ಬಹುತೇಕ ಮನೆಗಳು ಎರಡು ರಾಜ್ಯಗಳ ನಡುವೆ ವಿಂಗಡಿಸಲಾಗಿದೆ.

ಲಾಂಗ್ವಾವನ್ನು ಇನ್ನಷ್ಟು ಅಸಾಮಾನ್ಯವಾಗಿಸುವ ಸಂಗತಿ ಯಾವುದೆಂದರೆ ಇಲ್ಲಿನ ನಿವಾಸಿಗಳು ದ್ವಿಪೌರತ್ವವನ್ನು ಆನಂದಿಸುತ್ತಾರೆ. ವೀಸಾ ಅಗತ್ಯವಿಲ್ಲದೇ ಎರಡು ದೇಶಗಳ ನಡುವೆ ಪ್ರಯಾಣಿಸಲು ಮುಕ್ತರಾಗಿದ್ದಾರೆ. ಈ ಹಳ್ಳಿಯ ಜನರು ಭಾರತ ಮತ್ತು ಮ್ಯಾನ್ಮಾರ್ ನಡುವೆ ಯಾವುದೇ ಅಡಚಣೆಯಿಲ್ಲದೆ ಮುಕ್ತವಾಗಿ ಓಡಾಡಬಹುದು.

ಈ ಹಳ್ಳಿಯ ಕೆಲವರು ಮ್ಯಾನ್ಮಾರ್ ಸೇನೆಯ ಸದಸ್ಯರಾಗಿದ್ದಾರೆ. ಇದು ಅಪರೂಪದ ಸನ್ನಿವೇಶವಾಗಿದ್ದು, ಸಮುದಾಯವು ಎರಡೂ ದೇಶಗಳೊಂದಿಗೆ ಹೊಂದಿರುವ ನಿಕಟ ಸಂಬಂಧವನ್ನು ಇದು ಎತ್ತಿ ತೋರಿಸುತ್ತದೆ. ಲಾಂಗ್ವಾ ಜನರು ತಮ್ಮ ಶ್ರೀಮಂತ ಸಂಸ್ಕೃತಿ ಮತ್ತು ಸಂಪ್ರದಾಯಕ್ಕೆ ಹೆಸರುವಾಸಿಯಾದ ಕೊನ್ಯಾಕ್ ಬುಡಕಟ್ಟಿಗೆ ಸೇರಿದವರಾಗಿದ್ದಾರೆ.


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries