HEALTH TIPS

ಲಾರಿಯಿಂದ ಡೀಸೆಲ್ ಕಳವುಗೈದು ಮಾರಾಟ-ಚಾಲಕನ ಬಂಧನ


            ಕಾಸರಗೋಡು: ಲಾರಿಯಿಂದ ಸ್ವಂತ ಚಾಲಕನೇ ಡೀಸೆಲ್ ಕಳವು ನಡೆಸುತ್ತಿದ್ದ ಬಗ್ಗೆ ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಸಿಮೆಂಟ್ ಮಿಕ್ಸಿಂಗ್ ಲಾರಿ ಚಾಲಕ, ತಮಿಳ್ನಾಡು ಸೇಲಂನ ಮೇಟೂರ್ ನಿವಾಸಿ ಶಿವಕುಮಾರ್ ಎಂಬಾತನಿಗೆ ಈ ಕೇಸು.

           ಸಿಮೆಂಟ್ ಮಿಕ್ಸಿಂಗ್ ಲಾರಿಯೊಂದಿಗೆ ಸೀತಾಂಗೋಳಿ ಆಗಮಿಸಿದ್ದ ಶಿವಕುಮಾರ್, ಇಲ್ಲಿಂದ ಮುಂದೆ ಶಾಂತಿಪಳ್ಳ ತೆರಳಿ, ಅಲ್ಲಿನ ಜೆಸಿಬಿ ಚಾಲಕನೊಬ್ಬನಿಗೆ ಲಾರಿಯಿಂದ 30ಲೀ. ಡೀಸೆಲ್ ತೆಗೆದು ಮಾರಾಟ ಮಾಡಿದ್ದಾನೆ. ಈ ಮಾಹಿತಿ ತಮಿಳ್ನಾಡಿನಲ್ಲಿರುವ ಲಾರಿ ಮಾಲಿಕ ಮೇಟೂರ್ ನವೆಪ್ಪೆಟ್ಟಿ ನಿವಾಸಿ ಆನಂದ್ ಎಂಬವರಿಗೆ ಲಭಿಸಿದ್ದು, ಈ ಬಗ್ಗೆ ಕುಂಬಳೆ ಠಾಣೆಗೆ ದೂರು ಸಲ್ಲಿಸಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಲಾರಿ ಚಾಲಕನನ್ನು ಬಂಧಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries