ಮಂಜೇಶ್ವರ: ಶ್ರೀ ಸಾಯಿ ನಿಕೇತನ ಸೇವಾ ಸಂಸ್ಥೆಯಲ್ಲಿ ಕೇರಳ ಸ್ಟೇಟ್ ಸರ್ವಿಸ್ ಫೆನ್ಶನರ್ ಯೂನಿಯನ್ (ಕೆ. ಎಸ್.ಎಸ್.ಪಿ.ಯು) ಮಂಜೇಶ್ವರ ಘಟಕದ ವತಿಯಿಂದ ಓಣಂ ಹಬ್ಬದ ಭೋಜನ ಮತ್ತು ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು.
ಕೆ.ಎಸ್.ಎಸ್.ಪಿ.ಯು ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಕುಂಞಂಬು ನಾಯರ್ ಮಾತನಾಡಿ, ಓಣಂ ಹಬ್ಬ ಕೃಷಿ ಸಂಸ್ಕøತಿಯ ಪ್ರತೀಕವಾಗಿದ್ದು, ಜಾತಿ, ಧರ್ಮಕ್ಕೆ ಅತೀತವಾಗಿ ಆಚರಿಸುವ ಸಂಭ್ರಮದ ಹಬ್ಬವಾಗಿದ್ದು, ಆಶ್ರಮದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿರುವುದುದು ಶ್ಲಾಘನೀಯ ಎಂದು ತಿಳಿಸಿದರು. ಸಾಯಿನಿಕೇತನ ಸಂಸ್ಥೆಯ ಅಧ್ಯಕ್ಷ ಡಾ.ಉದಯಕುಮಾರ್ ಹಾಗೂ ಡಾ.ಶಾರದಾ ದಂಪತಿಯನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಕೆ.ಎಸ್.ಎಸ್.ಪಿ.ಯು. ಮಂಜೇಶ್ವರ ಘಟಕದ ಸದಸ್ಯ ಈಶ್ವರ್ ಮಾಸ್ಟರ್ ಯೋಗದ ಬಗ್ಗೆ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ವಿವಿಧ ಬಗೆಯ ಹಾಡುಗಾರಿಕೆ, ಮಿಮಿಕ್ರಿ, ಹರಟೆ, ಇನ್ನಿತರ ಕಾರ್ಯಕ್ರಮಗಳ ಮೂಲಕ ಆಶ್ರಮವಾಸಿಗಳನ್ನು ಸಂಘದ ಪದಾಧಿಕಾರಿಗಳು ಮನರಂಜಿಸಿದರು. ಆಶ್ರಮ ವಾಸಿಗಳು ಕೂಡ ಸಂತೋಷದಿಂದ ಪಾಲ್ಗೊಂಡರು. ಸಂಸ್ಥೆಯ ಕೋಶಾಧಿಕಾರಿ ಡಾ.ಶಾರದ, ಕೆ.ಎಸ್.ಎಸ್.ಪಿ.ಯು ವಿವಿಧ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಆಶ್ರಮದ ಸಿಬ್ಬಂದಿ ವರ್ಗ ಸಹಕರಿಸಿದರು ಕಾರ್ಯಕ್ರಮವನ್ನು ಕೆ.ಎಸ್.ಎಸ್.ಪಿ.ಯು ಮಂಜೇಶ್ವರ ಘಟಕದ ಕಾರ್ಯದರ್ಶಿ ಎ.ಶೀನಪ್ಪ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಕೆ.ಎಸ್.ಎಸ್.ಪಿ.ಯು ಮಂಜೇಶ್ವರ ಘಟಕದ ಜೊತೆ ಕಾರ್ಯದರ್ಶಿ ಶ್ರೀ ಕುಮಾರಿ ವಂದಿಸಿದರು.