HEALTH TIPS

ಗುರುವಾಯೂರು ದೇವಸ್ಥಾನದಲ್ಲಿ ಓಣಂ ಬಾಳೆಗೊನೆ ಸಮರ್ಪಣೆ

ಗುರುವಾಯೂರು: ಓಣಂ ಹಬ್ಬವನ್ನು ಸ್ವಾಗತಿಸಲು ಗುರುವಾಯೂರು ದೇವಸ್ಥಾನದಲ್ಲಿ ನಿನ್ನೆ  ಬಾಳೆಗೊನೆ ಸಮರ್ಪಣೆ ನಡೆಯಿತು. ಭಕ್ತರು ನಿನ್ನೆ ಮಾರುಕಟ್ಟೆಯಲ್ಲಿ ಬೃಹತ್ ಮಟ್ಟದ ಬಾಳೆಗೊನೆಗಳನ್ನು ಆಯ್ದುತಂದು ಅರ್ಪಿಸಿ ಶ್ರೀಕೃಷ್ಣನ ಪದತಲದಲ್ಲಿ ಪೂಜಿಸಿದರು. ಮುಂಜಾನೆ ಶಿವೇಲಿಯ ನಂತರ ಚಿನ್ನದ ಧ್ವಜಸ್ತಂಭದ ಕೆಳಗೆ ಗೊನೆಗಳನ್ನು ನೆಲದ ಮೇಲೆ ಅಕ್ಕಿಹಿಟ್ಟು, ತೆಂಗಿನಕಾಯಿ ಹೊದಿಸಿ ವಿಘ್ನೇಶ್ವರನಿಗೆ ಪೂಜೆ ಸಲ್ಲಿಸಿ ಭಕ್ತಿಯ ವಾತಾವರಣದಲ್ಲಿ ದೇವಸ್ಥಾನದ ಮೇಲ್ಶಾಂತಿ ಪಲ್ಲಿಸ್ಸೆರಿ ಮಣಾಯಿಕಲ್ ಮಧುಸೂದನನ್ ನಂಬೂದಿರಿ ಪ್ರಥಮ ದರ್ಶನವನ್ನು ಅರ್ಪಿಸಿದರು. ಮೇಲ್ಶಾಂತಿಯವರ ಪೂಜಾ ವಿಧಿವಿಧಾನಗಳ ಬಳಿಕ ದೇವಸ್ವಂ ಅಧ್ಯಕ್ಷ ಡಾ. ವಿ.ಕೆ. ವಿಜಯನ್, ಆಡಳಿತ ಮಂಡಳಿ ಸದಸ್ಯರಾದ ಸಿ. ಮನೋಜ್, ಕೆ.ಪಿ. ವಿಶ್ವನಾಥನ್, ದೇವಸ್ವಂ ಆಡಳಿತಾಧಿಕಾರಿ ಕೆ.ಪಿ. ವಿನಯನ್ ಇತರರು ತಮ್ಮ ಕಾಣಿಕೆಗಳನ್ನು ಅರ್ಪಿಸಿದರು.

ನಂತರ ಭಕ್ತಾದಿಗಳ ಉಪಸ್ಥಿತಿಯಲ್ಲಿ ಸಮರ್ಪಣೆಯೊಂದಿಗೆ ಕೊಡಿಮರ ರಂಗೇರಿಸಿತು. ನಿನ್ನೆ ರಾತ್ರಿ ಭೋಜನ ಪೂಜೆಯ ನಂತರ ಮುಂಜಾನೆ ವರೆಗೂ ಭಕ್ತರು ಸಹಸ್ರ ಸಂಖ್ಯೆಯಲ್ಲಿ ನೆರೆದಿದ್ದರು.  ದರ್ಶನಕ್ಕೆ ಬಂದ ಭಕ್ತರಿಗೆ ಆಸನದ ವ್ಯವಸ್ಥೆ ಮಾಡಲಾಗಿತ್ತು. ಸ್ವೀಕರಿಸಿದ ಬಾಳೆಗೊನೆಗಳಲ್ಲಿ ಮೂರನೇ ಒಂದು ಭಾಗವನ್ನು ದೇವಸ್ವಂನ ಆನೆಗಳಿಗೆ ನೀಡಲಾಯಿತು. ಉಳಿದ ಭಾಗವನ್ನು ಇಂದಿನ ತಿರುವೋಣ ಸದ್ಯಕ್ಕೆ(ಭೋಜನ)ಪಾಯಸ ಪ್ರಸಾದವಾಗಿ ನೀಡಲಾಯಿತು ಮತ್ತು ಉಳಿದ ಗೊನೆಗಳನ್ನು ಬಳಿಕ ಭಕ್ತರಿಗೆ ಹರಾಜು ಮಾಡಲಾಗುತ್ತದೆ. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries