ಮುಳ್ಳೇರಿಯ: ಮುಳ್ಳೇರಿಯದ ಶ್ರೀ ಸಾರ್ವಜನಿಕ ಗಣೇಶೋತ್ಸವದ ಸಂದರ್ಭ ಕಾರಡ್ಕ ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆ(ಜಿವಿಎಚ್‍ಎಸ್‍ಎಸ್) ಶಾಲೆಯ ವಿದ್ಯಾರ್ಥಿಗಳಿಂದ 'ಯಕ್ಷಚಿಣ್ಣರು' ತಾಳಮದ್ದಳೆ ನಡೆಯಿತು. ದಿ. ರಾಮಚಂದ್ರ ಕಾಸರಗೋಡು ಇವರ ಸ್ಮರಣಾರ್ಥವಾಗಿ ನಡೆದ ತಾಳಮದ್ದಳೆಯಲ್ಲಿ ಡಾ. ಚಂದ್ರಶೇಖರ ದಾಮ್ಲೆ ವಿರಚಿತ ಏಕಲವ್ಯ ಪ್ರಸಂಗವನ್ನು ಡಾ.ಶ್ರೀಶ ಕುಮಾರ ಪಂಜಿತ್ತಡ್ಕ ನಿರ್ದೇಶನದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳು ಸಮರ್ಥವಾಗಿ ನಡೆಸಿಕೊಟ್ಟರು.
ಹಿಮ್ಮೇಳದಲ್ಲಿ ಭಾಗವತರಾಗಿ ಕು. ಅನಘ್ರ್ಯ ತೆಕ್ಕೇಕೆರೆ ಸುಶ್ರಾವ್ಯ ಕಂಠಸಿರಿ ಮೆರೆದರು. ವೇಣುಗೋಪಾಲ ಬರೆಕೆರೆ ಚೆಂಡೆ ಹಾಗೂ ಕು| ವಂದನಾ ಮಾಯಿಲೆಂಕಿ ಮದ್ದಳೆಯಲ್ಲಿ ಸಹಕರಿಸಿದರು. ಅರ್ಥಧಾರಿಗಳಾಗಿ ದ್ರೋಣನಾಗಿ ಭೂಮಿಕ, ದ್ರುಪದ ಹಾಗೂ ಎರಡನೇ ದ್ರೋಣನಾಗಿ ಧನ್ಯಶ್ರೀ, ಶಬರನಾಗಿ ಸಚಿನ್, ಏಕಲವ್ಯನಾಗಿ ದೇವಿಕಾ, ಶಬರಿ ಹಾಗೂ ಧರ್ಮರಾಯನಾಗಿ ಗ್ರೀಷ್ಮ, ಅಶ್ವತ್ಥಾಮನಾಗಿ ವೀಕ್ಷಿತ, ಕೌರವನಾಗಿ ಸಹನ, ಭೀಮನಾಗಿ ಯುಕ್ತಿ, ಅರ್ಜುನನಾಗಿ ಮೋನಿಷ, ಬೇಡ ಹಾಗೂ ದೂತನಾಗಿ ಕೀರ್ತೇಶ್ ಮಿಂಚಿದರು. ಕಾರಡ್ಕ ಶಾಲಾ ಮಕ್ಕಳ ತಂಡದ ಈ ಪ್ರಥಮ ಪ್ರಯೋಗವು ಜನಮೆಚ್ಚುಗೆಗೆ ಕಾರಣವಾಯಿತು.