HEALTH TIPS

ನಾನು ಜಾದೂಗಾರನಲ್ಲ, ನಿಮ್ಮಲ್ಲಿ ನಾನೂ ಒಬ್ಬ:ದಿಸ್ಸಾನಾಯಕೆ

 ಕೊಲಂಬೊ: ಶ್ರೀಲಂಕಾದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಅನುರಾ ಕುಮಾರಾ ದಿಸ್ಸಾನಾಯಕೆ ಅವರು ಸೋಮವಾರ ಪ್ರಮಾಣವಚನ ಸ್ವೀಕರಿಸಿದ್ದು 'ನವಯುಗದ ಆರಂಭವಿದು' ಎಂದು ಅವರು ಘೋಷಿಸಿದ್ದಾರೆ.

ಶ್ರೀಲಂಕಾದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕುಟುಂಬ ರಾಜಕಾರಣಕ್ಕೆ ಹೊರತಾದ ಎಡಪಂಥೀಯ ವಿಚಾರಧಾರೆಯ ನಾಯಕರೊಬ್ಬರು ಅಧ್ಯಕ್ಷರಾಗಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಜಯಂತ ಜಯಸೂರ್ಯ ಅವರು ದಿಸ್ಸಾನಾಯಕೆ ಅವರಿಗೆ ಪ್ರಮಾಣವಚನ ಬೋಧಿಸಿದರು. ಪೀಪಲ್ಸ್‌ ಲಿಬರೇಷನ್‌ ಫ್ರಂಟ್‌ (ಜೆವಿಪಿ) ಪಕ್ಷದ ನಾಯಕರಾದ ದಿಸ್ಸಾನಾಯಕೆ ಅವರನ್ನು 'ನ್ಯಾಷನಲ್ಸ್‌ ಪೀಪಲ್ಸ್‌ ಪವರ್‌' ಮೈತ್ರಿಕೂಟವು ತನ್ನ ಅಧ್ಯಕ್ಷೀಯ ಅಭ್ಯರ್ಥಿಯನ್ನಾಗಿಸಿತ್ತು.

'ನಾನು ಜಾದೂಗಾರನಲ್ಲ. ನನಗೆ ಹಲವು ವಿಷಯಗಳು ತಿಳಿದಿಲ್ಲ ಹಾಗೂ ನನಗೆ ಮಿತಿಗಳೂ ಇವೆ. ಆದರೆ, ಪ್ರಜಾಪ್ರಭುತ್ವವನ್ನು ಕಾಪಾಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ದೇಶವನ್ನು ಆರ್ಥಿಕ ಹಿಂಜರಿತದಿಂದ ಮೇಲೆತ್ತಲು ಸಾಮೂಹಿಕ ಹೊಣೆಗಾರಿಕೆಯ ಅಗತ್ಯವಿದೆ. ನಾನೂ ಈ ಹೊಣೆಗಾರಿಕೆಯ ಭಾಗವಾಗಿರುತ್ತೇನೆ' ಎಂದು ಅಧ್ಯಕ್ಷ ದಿಸ್ಸಾನಾಯಕೆ ಹೇಳಿದರು.

'ರಾಜಕಾರಣಿಗಳಲ್ಲಿ ಜನರು ನಂಬಿಕೆ ಕಳೆದುಕೊಂಡಿದ್ದಾರೆ. ಈ ನಂಬಿಕೆಯನ್ನು ಪುನಃಸ್ಥಾಪಿಸಬೇಕು. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಜೊತೆಗೆ, ದೇಶವು ಒಬ್ಬಂಟಿಯಾಗಿ ಇರುವುದಕ್ಕೆ ಸಾಧ್ಯವಿಲ್ಲ. ಅಂತರರಾಷ್ಟ್ರೀಯ ಸಹಕಾರವು ಅಗತ್ಯವಾಗಿದೆ' ಎಂದರು.

ಪ್ರಧಾನಿ ರಾಜೀನಾಮೆ:

ಪ್ರಧಾನಿ ದಿನೇಶ್‌ ಗುಣವರ್ಧನೆ ಅವರು ತಮ್ಮ ಸ್ಥಾನಕ್ಕೆ ಸೋಮವಾರ ರಾಜೀನಾಮೆ ನೀಡಿದ್ದಾರೆ. ಅಧ್ಯಕ್ಷೀಯ ಚುನಾವಣೆ ಬಳಿಕ ಅಧಿಕಾರ ಹಸ್ತಾಂತರ ಮಾಡುವ ಭಾಗವಾಗಿ ದಿನೇಶ್‌ ರಾಜೀನಾಮೆ ನೀಡಿದ್ದಾರೆ. 2022ರಿಂದ ದಿನೇಶ್‌ ಅವರು ಪ್ರಧಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಅಧ್ಯಕ್ಷ ದಿಸ್ಸಾನಾಯಕೆ ಅವರು ಈಗ ಹೊಸ ಸಂಪುಟವನ್ನು ರಚಿಸಬೇಕಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries