ಕಾಸರಗೋಡು: ಪರವನಡ್ಕ ಸರ್ಕಾರಿ ಮಹಿಳಾ ಮಂದಿರದ ನಿವಾಸಿಗಳಿಗೆ ಯೋಗ ತರಬೇತಿ ನೀಡಲಿರುವ ತರಬೇತುದಾರರ ಹುದ್ದೆ ತೆರವಾಗಿದೆ. ಆಸಕ್ತ ಉದ್ಯೋಗಾರ್ಥಿಗಳು ಅಕ್ಟೋಬರ್ 4 ರಂದು ಬೆಳಗ್ಗೆ 10ಕ್ಕೆ ಅಸಲಿ ಪ್ರಮಾಣ ಪತ್ರಗಳ ಸಹಿತ ವಿದ್ಯಾನಗರ ಸಿವಿಲ್ ಸ್ಟೇಷನ್‍ನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿಯಲ್ಲಿ ನಡೆಯುವ ಸಂದರ್ಶನಕ್ಕೆ ಹಾಜರಾಗಬೇಕು. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ (04994 235201, 9846892808)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.