ಮಂಜೇಶ್ವರ: ಮಂಜೇಶ್ವರ ಉಪಜಿಲ್ಲಾ ಶಾಸ್ತ್ರೋತ್ಸವ ಸಂಘಟನಾ ಸಮಿತಿ ರೂಪೀಕರಣ ಸಭೆ ಸೋಮವಾರ ಕಳಿಯೂರು ಸಂತ ಜೋಸೆಫರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿತು.
ಮೀಂಜ ಪಂಚಾಯತಿ ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷೆ ಶಮಿನ ಟೀಚರ್ ಉದ್ಘಾಟಿಸಿದರು. ಉಪಜಿಲ್ಲಾ ವಿದ್ಯಾಧಿಕಾರಿ ರಾಜಗೋಪಾಲ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವರ್ಕಾಡಿ ಪಂಚಾಯತ್ ಅಧ್ಯಕ್ಷೆ ಭಾರತಿ, ಜಿಲ್ಲಾ ಪಂಚಾಯತ್ ಸದಸ್ಯೆ ಕಮಲಾಕ್ಷಿ, ಬ್ಲಾಕ್ ಪಂಚಾಯತ್ ಸದಸ್ಯ ರಾಧಾಕೃಷ್ಣ ಕೆ ವಿ, ಬ್ಲಾಕ್ ಪಂಚಾಯತ್ ಸದಸ್ಯೆ ಅಶ್ವಿನಿ ಎಂ ಎಲ್ , ಮೀಂಜ ಪಂಚಾಯತ್ ಉಪಾಧ್ಯಕ್ಷ ಜಯರಾಮ ಬಲ್ಲಂಗುಡೇಲ್, ವರ್ಕಾಡಿ ಪಂಚಾಯತ್ ಉಪಾಧ್ಯಕ್ಷ ಅಬೂಬಕ್ಕರ್ ಸಿದ್ದಿಕ್, ವಾರ್ಡು ಸದಸ್ಯ ಬಾಬು, ಉದ್ಯಮಿ ಗೋಪಾಲ ಶೆಟ್ಟಿಅರಿಬೈಲ್, ಶಾಲಾ ಸಂಚಾಲಕ ವಂ. ಫಾ ಬೇಸಿಲ್ ವಾಸ್ ಶುಭ ಹಾರೈಸಿದರು. ಪಿ. ಟಿ. ಎ ಸದಸ್ಯರು, ವರ್ಕಾಡಿ ಚರ್ಚಿನ ಉಪಾಧ್ಯಕ್ಷ ರಾಜೇಶ್, ಹಳೆ ವಿದ್ಯಾರ್ಥಿ ಸದಸ್ಯರು, ನಿವೃತ ಮುಖ್ಯೋಪಾಧ್ಯಾಯರು, ಅಧ್ಯಾಪಕರು, ಮುಖ್ಯ ಶಿಕ್ಷಕರು, ಊರ ವಿದ್ಯಾಭಿಮಾನಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಎಚ್.ಎಂ.ಪೋರಂ ಕಾರ್ಯದರ್ಶಿ ಶಾಮ್ ಭಟ್ ಕ್ರೋಡಿಕರಿಸಿದರು. ಮುಖ್ಯ ಶಿಕ್ಷಕಿ ಪುμÁ್ಪವತಿ ಸ್ವಾಗತಿಸಿ, ವೀಣಾ ಡಿಸೋಜ ವಂದಿಸಿದರು. . ಶಿಕ್ಷಕ ಮಹಮ್ಮದ್ ಬಶೀರ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮ ಸಮಿತಿ ಕನ್ವೀನರ್ ರೋಮನ್ ಡಿಸೋಜ ಪೇನೆಲ್ ಮಂಡಿಸಿದರು. ಆರ್ಥಿಕ ಸಮಿತಿ ಕನ್ವೀನರ್ ಸಿಪ್ರಿಯನ್ ಡಿಸೋಜ ಬಜೆಟ್ ಮಂಡಿಸಿದರು.