HEALTH TIPS

'ಪಿಒಕೆ' ನಿವಾಸಿಗಳು 'ನಮ್ಮವರೇ: ರಾಜನಾಥ್‌ ಸಿಂಗ್‌

 ಶ್ರೀನಗರ: 'ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ನೆಲೆಸಿರುವವರನ್ನೂ ಪಾಕಿಸ್ತಾನವು ವಿದೇಶಿಯರು ಎಂದು ಪರಿಗಣಿಸುತ್ತಿದೆ. ನಾವು ನಿಮ್ಮನ್ನು ನಮ್ಮವರೇ ಎಂದೇ ಭಾವಿಸುತ್ತೇವೆ. ಇಲ್ಲಿ ವಾಸಿಸುತ್ತಿರುವ ಜನರು ಭಾರತವನ್ನು ಸೇರಲು ಬಯಸಿದರೆ, ಅದನ್ನು ಪರಿಶೀಲಿಸಲಾಗುವುದು' ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಭರವಸೆ ನೀಡಿದರು.

ಜಮ್ಮುವಿನ ರಾಮ್‌ಬನ್‌ನಲ್ಲಿ ಚುನಾವಣಾ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, 'ಪಾಕ್‌ ಆಕ್ರಮಿತ ಕಾಶ್ಮೀರದ ನಿವಾಸಿಗಳನ್ನು ವಿದೇಶಿಯರು ಎಂದು ಪಾಕಿಸ್ತಾನದ ಸಾಲಿಸಿಟರ್‌ ಜನರಲ್‌ ಅವರು ನ್ಯಾಯಾಲಯದಲ್ಲಿ ನಿರ್ಣಯವನ್ನು ಮಂಡಿಸಿದ್ದಾರೆ. ಭಾರತ ಸರ್ಕಾರವು ಪಿಒಕೆ ನಿವಾಸಿಗಳನ್ನು ನಮ್ಮವರು ಎಂದೇ ಭಾವಿಸುತ್ತೇವೆ' ಎಂದು ಸ್ಪಷ್ಟಪಡಿಸಿದರು.

'2019ರ ಆಗಸ್ಟ್‌ ತಿಂಗಳಲ್ಲಿ 370ನೇ ವಿಧಿ ರದ್ದುಪಡಿಸಿದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪರಿಸ್ಥಿತಿಯಲ್ಲಿ ಮಹತ್ತರ ಬದಲಾವಣೆಯಾಗಿದೆ. ನಮಗೆ ಅಧಿಕಾರ ನೀಡಿದರೆ, ಮುಂದಿನ ಹತ್ತು ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ಮಾದರಿ ರಾಜ್ಯವನ್ನಾಗಿ ಪರಿವರ್ತಿಸುತ್ತೇವೆ' ಎಂದು ಭರವಸೆ ನೀಡಿದರು.

'ಇಲ್ಲಿನ ಮಹತ್ತರ ಬದಲಾವಣೆಯನ್ನು ಗಮನಿಸಿ ಪಾಕ್‌ ಆಕ್ರಮಿತ ಕಾಶ್ಮೀರದ ನಿವಾಸಿಗಳು ಕೂಡ ನಾವು ಅಲ್ಲಿ ಇರಲು ಬಯಸುವುದಿಲ್ಲ, ಭಾರತದ ಜತೆಗೆ ಹೋಗಲು ಬಯಸುತ್ತೇವೆ ಎಂದು ತಿಳಿಸಲಿದ್ದಾರೆ' ಎಂದು ವಿವರಿಸಿದರು.

10 ಅಭ್ಯರ್ಥಿಗಳ ಬಿಜೆಪಿಯ 6ನೇ ಪಟ್ಟಿ ಬಿಡುಗಡೆ

ನವದೆಹಲಿ (ಪಿಟಿಐ): ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಗೆ ಬಿಜೆಪಿಯು 10 ಅಭ್ಯರ್ಥಿಗಳ ಆರನೇ ಪಟ್ಟಿಯನ್ನು ಭಾನುವಾರ ಬಿಡುಗಡೆಗೊಳಿಸಿದೆ. ಉಧಂಪುರ ಪೂರ್ವ ಕ್ಷೇತ್ರದಿಂದ ಆರ್‌.ಎಸ್‌.ಪಥಾನಿಯಾ ಹಾಗೂ ಬಂಡಿಪೊರಾ ಕ್ಷೇತ್ರದಿಂದ ನಾಸೀರ್‌ ಅಹಮ್ಮದ್‌ ಲೋನ್‌ ಅವರನ್ನು ಕಣಕ್ಕಿಳಿಸಲಾಗಿದೆ. 90 ವಿಧಾನಸಭಾ ಸದಸ್ಯರನ್ನು ಹೊಂದಿರುವ ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯು ಮೂರು ಹಂತದಲ್ಲಿ ನಡೆಯಲಿದೆ. ಫಕೀರ್‌ ಮೊಹಮ್ಮದ್‌ ಖಾನ್‌ ಅವರು ಗುರೇಜ್‌ (ಎಸ್‌.ಟಿ ಮೀಸಲು) ಅಬ್ದುಲ್‌ ರಶೀದ್‌ ಖಾನ್‌ ಅವರು ಸೋನಾವಾರಿ ಹಾಗೂ ಗುಲಾಂ ಮೊಹಮ್ಮದ್‌ ಮಿರ್‌ ಅವರು ಹಂದ್ವಾರದಿಂದ ಸ್ಪರ್ಧಿಸಲಿದ್ದಾರೆ. ಭರತ್‌ ಭೂಷಣ್‌ ಅವರು ಕಥುವಾ ರಾಜೀವ್‌ ಭಗತ್‌ ಅವರು ಬಿಷ್ಣಾ ಹಾಗೂ ಸುರೀಂದರ್‌ ಭಗತ್‌ ಅವರು ಮರ್ಹಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಈ ಮೂರು ಕ್ಷೇತ್ರಗಳು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಗಳಾಗಿವೆ. ಬಹು ವಿಧಾನಸಭಾ ಕ್ಷೇತ್ರದಿಂದ ವಿಕ್ರಂ ರಂಧಾವಾ ಅವರನ್ನು ಕಣಕ್ಕಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries