ಮಧೂರು: ತೆಂಕುತಿಟ್ಟು ಯಕ್ಷಗಾನದ ಶಾಸ್ತ್ರಿಯ ನಾಟ್ಯ ಗುರು ಕರ್ಗಲ್ಲು ವಿಶ್ವೇಶ್ವರ ಭಟ್ ಇವರಿಂದ ಯಕ್ಷಗಾನ ಶಿಕ್ಷಕರಿಗೆ ಶಿಕ್ಷಣವನ್ನು ಸಿರಿಬಾಗಿಲು ಪ್ರತಿಷ್ಠಾನದಲ್ಲಿ ಆರಂಭಿಸಲಾಯಿತು. ಕಾರ್ಯಕ್ರಮಕ್ಕೆ ಅಮೆರಿಕದಿಂದ ಆಗಮಿಸಿದ ಕಲಾಪೆÇೀಷಕ ದಿನೇಶ ಶ್ರೀನಿವಾಸರಾವ್, ಮನೋರಮಾ ದಿನೇಶಶ್ರೀನಿವಾಸರಾವ್ ಹಾಗೂ ಕರ್ನಾಟಕ ಬ್ಯಾಂಕ್‍ನ ಡಿ. ಜಿ. ಎಂ. ವಸಂತ ಹೇರ್ಳೆ ಅವರು ಸಮಾರಂಭಕ್ಕೆ ಚಾಲನೆ ನೀಡಿದರು.
ಯಕ್ಷಗಾನ ಕ್ಷೇತ್ರಕ್ಕೆ ಬೃಹತ್ ಕೊಡುಗೆ ನೀಡಿರುವ ಪ್ರತಿಷ್ಠಾನದಲ್ಲಿ ಕಾರ್ಯಾಚರಿಸುತ್ತಿರುವ ಪಣಂಬೂರು ವೆಂಕಟ್ರಾಯ ಐತಾಳರ ಹೆಸರಿನ ತೆಂಕುತಿಟ್ಟು ಯಕ್ಷಗಾನ ಮ್ಯೂಸಿಯಂ, ಇದೊಂದು ಯಕ್ಷಗಾನ ಕ್ಷೇತ್ರಕ್ಕೆ ದೊಡ್ಡ ಕೊಡುಗೆಯಾಗಿದೆ. ಸಾಂಸ್ಕøತಿಕ ಭವನಕ್ಕೆ ಅಧ್ಯಯನಕ್ಕೆ ಬರುವವರಿಗೆ ಯಕ್ಷಗಾನ ಮ್ಯೂಸಿಯಂ ಮುಂದಿನ ದಿನಗಳಲ್ಲಿ ಉಪಯುಕ್ತವಾಗಲಿ. ಎಂದು ಮನೋರಮಾ ದಿನೇಶ ಶ್ರೀನಿವಾಸರಾವ್ ತಿಳಿಸಿದರು.
ಸಾಂಸ್ಕೃತಿಕ ವಲಯ, ಶಿಕ್ಷಣ ಕ್ಷೇತ್ರಕ್ಕೆ ಕರ್ನಾಟಕ ಬ್ಯಾಂಕ್ ತಮ್ಮಿಂದಾಗುವ ಸಹಕಾರದ ಕೊಡುಗೆ ನೀಡುತ್ತಿದ್ದು, ಬ್ಯಾಂಕಿನ ಹೊಸ ಯೋಜನೆಗಳನ್ನು ಗ್ರಾಹಕರಿಗೆ ವಸಂತ ಹೇರ್ಳೆ ಯವರು ಮನವರಿಕೆ ಮಾಡಿದರು. ಈ ಸಂದರ್ಭ ದಿನೇಶ ಶ್ರೀನಿವಾಸರಾವ್ ಮತ್ತು ಮನೋರಮಾ ರಾವ್ ಅವರನ್ನು ಸಿರಿಬಾಗಿಲು ಪ್ರತಿಷ್ಠಾನದ ಮಹಾಪೆÇೀಷಕರಾಗಿ ಹಾಗೂ ವಸಂತ ಹೇರ್ಳೆ ಅವರನ್ನು ವಿಶೇಷವಾಗಿ ಅಭಿನಂದಿಸಲಾಯಿತು. ತೆಂಕುತಿಟ್ಟು ಯಕ್ಷಗಾನದ ಶಾಸ್ತ್ರೀಯ ನಾಟ್ಯ ಗುರುಗಳಾದ ಕರ್ಗಲ್ಲು ವಿಶ್ವೇಶ್ವರ ಭಟ್, ಲಕ್ಷ್ಮಿನಾರಾಯಣ ತಂತ್ರಿ ಕಾವು ಮಠ, ಜಗದೀಶ್ ಕೂಡ್ಲು, ಸುಮಿತ್ರಾ ಮಯ್ಯ ಮುಂತಾದವರು ಉಪಸ್ಥಿತರಿದ್ದರು. ರಾಮಕೃಷ್ಣಯ್ಯ ಸ್ವಾಗತಿಸಿದರು. ಡಾ. ಶ್ರುತಕೀರ್ತಿ ರಾಜ್ ಕಾರ್ಯಕ್ರಮ ನಿರೂಪಿಸಿದರು. ಆ ಬಳಿಕ 20 ಕ್ಕೂ ಹೆಚ್ಚು ಶಿಕ್ಷಕರಿಗೆ ಪ್ರಥಮ ಹಂತದಲ್ಲಿ ಕರ್ಗಲ್ಲು ವಿಶ್ವೇಶ್ವರ ಭಟ್ ಅವರು ತರಬೇತಿ ನೀಡಿದರು.