ಕಾಸರಗೋಡು: ಓಣಂ ನಿಮಿತ್ತ ಕಾಸರಗೋಡು ಮಾರುಕಟ್ಟೆಯ 36 ಅಂಗಡಿಗಳಲ್ಲಿ ಕಂದಾಯ ಇಲಾಖೆ, ನಾಗರಿಕ ಸರಬರಾಜು ಇಲಾಖೆ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖೆ ಜಂಟಿಯಾಗಿ ತಪಾಸಣೆ ನಡೆಸಿತು.
ತಪಾಸಣೆ ವೇಳೆ 15 ಅಂಗಡಿಗಳಲ್ಲಿ ಅಕ್ರಮ ನಡೆದಿರುವುದು ಪತ್ತೆಯಾಗಿದೆ. ಪರವಾನಗಿ ಪರಿಶೀಲನೆಗೆ ಹಾಜರಾಗದ ಸಂಸ್ಥೆಗಳ ಮಾಲೀಕರ ವಿರುದ್ಧ ನೋಟಿಸ್ ಜಾರಿ ಮಾಡಲಾಗಿದೆ. ಬೆಲೆ ಮಾಹಿತಿ ಪಟ್ಟಿಯನ್ನು ಪ್ರದರ್ಶಿಸದ ಅಂಗಡಿಗಳು ಬೆಲೆ ಮಾಹಿತಿಯನ್ನು ಪ್ರದರ್ಶಿಸಲು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಹೆಚ್ಚುವರಿ ಬೆಲೆ ದಾಖಲಾಗಿರುವ ಅಂಗಡಿಗಳಲ್ಲಿ ಸರಿಯಾದ ಬೆಲೆ ದಾಖಲಿಸುವಂತೆ ಸೂಚಿಸಲಾಗಿದೆ.
ಎ.ಡಿ.ಎಂ.ಪಿ. ಅಖಿಲ್, ಜಿಲ್ಲಾ ಸರಬರಾಜು ಅಧಿಕಾರಿ ಕೆ.ಎನ್.ಬಿಂದು, ತಾಲೂಕು ಅಧಿಕಾರಿ ಕೃಷ್ಣ ನಾಯ್ಕ್, ಪಡಿತರ ನಿರೀಕ್ಷಕ ದಿಲೀಪ್, ಕಾನೂನು ಮಾಪನ ನಿರೀಕ್ಷಕಿ ರಮ್ಯಾ ಮತ್ತಿತರರು ತಪಾಸಣೆಯಲ್ಲಿ ಭಾಗವಹಿಸಿದ್ದರು.