ಕೊಟ್ಟಾಯಂ: ಸಂಸದ ಆಂಟನ್ ಆಂಟನಿ ಅವರ ಸೋದರಳಿಯ ಮತ್ತು ಪಾಲಾ ಮುನ್ನಿಲಾವ್ ಮೂಲದ ಜಿನ್ಸನ್ ಆಂಟನ್ ಚಾಲ್ರ್ಸ್ ಅವರು ಆಸ್ಟ್ರೇಲಿಯಾದ ಕ್ಯಾಬಿನೆಟ್‍ಗೆ ಸೇರ್ಪಡೆಗೊಂಡಿದ್ದಾರೆ.
ಕೇರಳೀಯರೊಬ್ಬರು ಆಸ್ಟ್ರೇಲಿಯಾದಲ್ಲಿ ಸಚಿವರಾಗುತ್ತಿರುವುದು ಇದೇ ಮೊದಲು.
ಜಿನ್ಸನ್ ಅವರು ಕ್ರೀಡೆ, ಕಲೆ, ಸಂಸ್ಕøತಿ ಮತ್ತು ಯುವ ಕಲ್ಯಾಣ ಇಲಾಖೆಗಳ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಮೊದಲ ಹಂತದಲ್ಲಿ ಘೋಷಣೆಯಾದ ಎಂಟು ಸದಸ್ಯರ ಸಂಪುಟದಲ್ಲಿ ಜಿನ್ಸನ್ ಅವರಿಗೂ ಸ್ಥಾನ ಲಭಿಸಿದೆ. ಅವರು ಲೇಬರ್ ಪಕ್ಷದ ಟಿಕೆಟ್‍ನಲ್ಲಿ ಉತ್ತರ ಪ್ರಾಂತ್ಯದಿಂದ ಸಂಸತ್ತಿನ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು.
ಅವರು 2011 ರಲ್ಲಿ ನರ್ಸಿಂಗ್ ವೃತ್ತಿಗಾಗಿ ಆಸ್ಟ್ರೇಲಿಯಾಕ್ಕೆ ತೆರಳಿದ್ದರು ಮತ್ತು ಉತ್ತರ ಪ್ರಾಂತ್ಯದ ಸರ್ಕಾರದ ಟಾಪ್ ಎಂಡ್ ಮೆಂಟಲ್ ಹೆಲ್ತ್‍ನ ನಿರ್ದೇಶಕರಾಗಿ ಮತ್ತು ಚಾಲ್ರ್ಸ್ ಡಾರ್ವಿನ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿದ್ದಾರೆ. ಕೇರಳೀಯರು ಆಸ್ಟ್ರೇಲಿಯಾದ ಇತರ ರಾಜ್ಯಗಳಲ್ಲಿ ಸ್ಪರ್ಧಿಸಿದ್ದರೂ, ಜಿನ್ಸನ್ ಚಾಲ್ರ್ಸ್ ಮಾತ್ರ ಗೆಲುವು ಸಾಧಿಸಿದ್ದರು.