HEALTH TIPS

ಹಿಂದೂಗಳು ಉದಾರಿಗಳು; ಎಲ್ಲರಿಗೂ ಪ್ರೀತಿ ಹಂಚಿ, ಒಳಿತನ್ನೇ ಬಯಸುತ್ತಾರೆ: ಭಾಗವತ್‌

       ಜೈಪುರ: ಹಿಂದೂಗಳೆಂದರೆ ಉದಾರಿಗಳು ಮತ್ತು ಧಾರ್ಮಿಕ ನಂಬಿಕೆ, ಜಾತಿ ಮತ್ತು ಆಚರಣೆಗಳ ಹೊರತಾಗಿಯೂ ಅವರು ಪ್ರತಿಯೊಬ್ಬರಿಗೂ ಒಳಿತನ್ನು ಬಯಸುತ್ತಾರೆ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಭಾನುವಾರ ಹೇಳಿದರು.

       ಹಿಂದೂ ಸಮಾಜವು ದೇಶದ ಜೀವಾಳ (ಕರ್ತಾ-ಧರ್ತಾ) ಎಂದು ಹೇಳಿದರು.

'ದೇಶದಲ್ಲಿ ಏನಾದರೂ ತಪ್ಪು ನಡೆಯುತ್ತಿದ್ದರೆ, ಅದು ಹಿಂದೂ ಸಮಾಜದ ಮೇಲೆ ಪ್ರಭಾವ ಬೀರುತ್ತದೆ. ದೇಶದಲ್ಲಿ ಏನೇ ಒಳಿತಾದರೂ ಅದು ಹಿಂದೂ ಸಮಾಜಕ್ಕೆ ಹಿರಿಮೆ ತಂದುಕೊಡುತ್ತದೆ. ಏಕೆಂದರೆ ಹಿಂದೂ ಸಮಾಜವು ಈ ದೇಶದ ಕರ್ತಾ-ಧರ್ತಾ' ಎಂದರು.

           ಹಿಂದೂಗಳು ಉದಾರಿಗಳು, ಎಲ್ಲರಿಗೂ ಪ್ರೀತಿ ಹಂಚುತ್ತಾರೆ, ಎಲ್ಲರಿಗೂ ಒಳಿತು ಬಯಸುತ್ತಾರೆ. ಈ ಗುಣಗಳನ್ನು ಹೊಂದಿರುವವರನ್ನು ಅವರ ಆಚರಣೆ, ಭಾಷೆ, ಜಾತಿಯ ಹೊರತಾಗಿ ಹಿಂದೂ ಎಂದು ಪರಿಗಣಿಸಲಾಗುತ್ತದೆ ಎಂದು ಹೇಳಿದರು.

             ಮೊದಲು ಸಂಘದ ಬಗ್ಗೆ ಬಹುತೇಕರಿಗೆ ತಿಳಿದಿರಲಿಲ್ಲ. ಆದರೆ ಈಗ ವ್ಯಾಪಕವಾಗಿ ಗುರುತಿಸಿಕೊಂಡಿದೆ ಮತ್ತು ಬಾಹ್ಯವಾಗಿ ವಿರೋಧಿಸುವವರೂ ಸಂಘಕ್ಕೆ ಗೌರವ ನೀಡುತ್ತಾರೆ ಎಂದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries