ಕಠ್ಮಂಡು: ನೇಪಾಳದಾದ್ಯಂತ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮ ಉಂಟಾದ ಪ್ರವಾಹ ಸ್ಥಿತಿಯಿಂದಾಗಿ ಮೃತಪಟ್ಟವರ ಸಂಖ್ಯೆ 112ಕ್ಕೆ ಏರಿಕೆಯಾಗಿದ್ದು, ಇನ್ನು 68 ಮಂದಿ ಕಾಣೆಯಾಗಿದ್ದಾರೆ.
ಕಠ್ಮಂಡು: ನೇಪಾಳದಾದ್ಯಂತ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮ ಉಂಟಾದ ಪ್ರವಾಹ ಸ್ಥಿತಿಯಿಂದಾಗಿ ಮೃತಪಟ್ಟವರ ಸಂಖ್ಯೆ 112ಕ್ಕೆ ಏರಿಕೆಯಾಗಿದ್ದು, ಇನ್ನು 68 ಮಂದಿ ಕಾಣೆಯಾಗಿದ್ದಾರೆ.
195ಕ್ಕೂ ಹೆಚ್ಚು ಮನೆ ಹಾಗೂ 8 ಸೇತುವೆಗಳಿಗೆ ಹಾನಿಯಾಗಿವೆ. 3 ಸಾವಿರಕ್ಕೂ ಹೆಚ್ಚು ಜನರನ್ನು ಭದ್ರತಾ ಪಡೆ ಅಧಿಕಾರಿಗಳು ರಕ್ಷಿಸಿದ್ದಾರೆ.
'ಕಠ್ಮಂಡುವಿನಲ್ಲಿ ಈ ಪ್ರಮಾಣದ ಪ್ರವಾಹವನ್ನು ನಾನು ಹಿಂದೆಂದೂ ನೋಡಿಲ್ಲ' ಎಂದು ಹವಾಮಾನ ಮತ್ತು ಪರಿಸರ ತಜ್ಞ ಅರುಣ್ ಭಕ್ತ ಶ್ರೇಷ್ಠ ಹೇಳಿದ್ದಾರೆ.
ಕಠ್ಮಂಡುವಿನ ಪ್ರಮುಖ ನದಿ ಭಾಗಮತಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಕಠ್ಮಂಡುವಿನಲ್ಲಿ 4 ಲಕ್ಷ ಜನಸಂಖ್ಯೆಯಿದೆ.
'40-45 ವರ್ಷಗಳಲ್ಲಿ ಇಂತಹ ಭೀಕರ ಪ್ರವಾಹವನ್ನು ಕಂಡಿರಲಿಲ್ಲ. ಅಪಾರ ಪ್ರಮಾಣದ ಹಾನಿಯಾಗಿದೆ' ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.