ನವದೆಹಲಿ: ಧಾರ್ಮಿಕ ಸಮಾವೇಶಗಳಲ್ಲಿ ಮತಾಂತರ ನಿಲ್ಲದೇ ಹೋದರೆ ಈ ದೇಶದ ಬಹುಸಂಖ್ಯಾತರು ಒಂದು ದಿನ ಅಲ್ಪಸಂಖ್ಯಾತರಾಗುತ್ತಾರೆ ಎಂಬ ಅಲಹಾಬಾದ್ ಹೈಕೋರ್ಟ್ ಉಲ್ಲೇಖ ಮಾಡಿದ್ದನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಕಡತದಿಂದ ತೆಗೆದುಹಾಕಿದೆ.
ನವದೆಹಲಿ: ಧಾರ್ಮಿಕ ಸಮಾವೇಶಗಳಲ್ಲಿ ಮತಾಂತರ ನಿಲ್ಲದೇ ಹೋದರೆ ಈ ದೇಶದ ಬಹುಸಂಖ್ಯಾತರು ಒಂದು ದಿನ ಅಲ್ಪಸಂಖ್ಯಾತರಾಗುತ್ತಾರೆ ಎಂಬ ಅಲಹಾಬಾದ್ ಹೈಕೋರ್ಟ್ ಉಲ್ಲೇಖ ಮಾಡಿದ್ದನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಕಡತದಿಂದ ತೆಗೆದುಹಾಕಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರನ್ನು ಒಳಗೊಂಡ ನ್ಯಾಯಪೀಠವು ಆರೋಪಿಯೊಬ್ಬರಿಗೆ ಜಾಮೀನು ಮಂಜೂರು ಮಾಡಿ, ಈ ಅಭಿಪ್ರಾಯ ವ್ಯಕ್ತಪಡಿಸಿತು.
'ಹೈಕೋರ್ಟ್‌ನ ಈ ಅಭಿಪ್ರಾಯಕ್ಕೂ ಈ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ. ಇದು ಪ್ರಕರಣದ ವಿಲೇವಾರಿಗೂ ಅಡ್ಡಿಯಾಗುವುದಿಲ್ಲ. ಹಾಗೆಯೇ ಹೈಕೋರ್ಟ್ ಅಥವಾ ಯಾವುದೇ ಕೋರ್ಟ್ ವಿಚಾರಣೆ ಸಂದರ್ಭದಲ್ಲಿ ಅಲಹಾಬಾದ್ ಹೈಕೋರ್ಟ್‌ನ ಈ ಅಭಿಪ್ರಾಯವನ್ನು ಉಲ್ಲೇಖಿಸುವಂತಿಲ್ಲ' ಎಂದು ಸುಪ್ರೀಂ ಕೋರ್ಟ್ ಸೂಚಿಸಿತು.