ಮುಳ್ಳೇರಿಯ: ಕೀಕಾನ ವೃಂದಾವನ ಬಾಲಗೋಕುಲದ ಆಶ್ರಯದಲ್ಲಿ ಭಾನುವಾರ ಓಣಂ ಅಂಗವಾಗಿ ಓಣಂ ಉತ್ಸವ 2024 ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಮಕ್ಕಳ ಹಾಗೂ ಹಿರಿಯರ ವಿಭಾಗಗಳಲ್ಲಿ ಒಟ್ಟು 18 ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಗಳಲ್ಲಿ 150ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಮಧ್ಯಾಹ್ನ ಓಣಂ ಸದ್ಯ(ಭೋಜನ) ಏರ್ಪಡಿಸಲಾಗಿತ್ತು. ವೃಂದಾವನ ಮಾತೃಸಮಿತಿಯ ತಾಯಂದಿರಿಂದ ಕೈಕೊಟ್ಟು ಕಳಿ ಸಾಂಸ್ಕøತಿಕ ವೈವಿಧ್ಯ ಗಮನ ಸೆಳೆಯಿತು. ಸ್ಪರ್ಧೆಯಲ್ಲಿನ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.