ಅಂಗಡಿಗಳಲ್ಲಿ ಮಾರಾಟ ಮಾಡುತ್ತಿದ್ದ 'ಹಾಲು', 'ಪನೀರ್', 'ಪೇಡಾ', 'ಬರ್ಫಿ', 'ಮಿಲ್ಕ್ ಕೇಕ್', 'ರಸಗುಲ್ಲಾ', 'ಸೋನ್ ಪಾಪಡಿ' ಸೇರಿದಂತೆ ಮಸಾಲೆಗಳಿಂದ ತಯಾರಿಸಿದ ಸಿಹಿತಿಂಡಿಗಳ ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದು ಎಫ್‌ಎಸ್‌ಡಿಎ ಸಹಾಯಕ ಆಯುಕ್ತ ಧೀರೇಂದ್ರ ಪ್ರತಾಪ್ ಸಿಂಗ್ ತಿಳಿಸಿದ್ದಾರೆ.
43 ಪದಾರ್ಥಗಳ ಪೈಕಿ 42 ಪದಾರ್ಥಗಳು ಉತ್ತಮ ಗುಣಮಟ್ಟ ಹೊಂದಿವೆ. ಆದರೆ, 'ಪೇಡಾ' ಮಾದರಿಯನ್ನು ಮಾತ್ರ ಪರೀಕ್ಷೆಗಾಗಿ ಲಖನೌಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಕಲಬೆರಕೆ 'ಖೋವಾ' ಮಾರಾಟ; ಡಿಂಪಲ್ ಯಾದವ್ ಆರೋಪ
ತಿರುಪತಿಯಲ್ಲಿ ಲಾಡು ತಯಾರಿಸುವಾಗ ಪ್ರಾಣಿಗಳ ಕೊಬ್ಬು ಬಳಸಲಾಗಿದೆ ಎಂಬ ಆರೋಪ ಭುಗಿಲೆದ್ದ ಬೆನ್ನಲ್ಲೇ, ಮಥುರಾದಲ್ಲಿ ಕಲಬೆರಕೆಯುಕ್ತ 'ಖೋವಾ' ಮಾರುತ್ತಿದ್ದು, ತನಿಖೆ ನಡೆಸಬೇಕು' ಎಂದು ಸಮಾಜವಾದಿ ಪಕ್ಷದ ಸಂಸದೆ ಡಿಂಪಲ್ ಯಾದವ್ ಆಗ್ರಹಿಸಿದ್ದಾರೆ.
'ತಿರುಪತಿ ಲಾಡುಗಳ ತಯಾರಿಕೆ ವೇಳೆ ಕಲಬೆರಕೆಯುಕ್ತ ತುಪ್ಪ ಬಳಸಿರುವುದು ಅತ್ಯಂತ ಗಂಭೀರ ವಿಚಾರ. ಇದು ಜನರ ಧಾರ್ಮಿಕ ನಂಬಿಕೆಗೆ ನೋವುಂಟು ಮಾಡಿದೆ. ಆಹಾರ ಇಲಾಖೆಯ ವೈಫಲ್ಯದಿಂದ ಕಲಬೆರಕೆಯುಕ್ತ ಆಹಾರ, ತೈಲ ಬಳಕೆಯಿಂದ ಜನರು ಗಂಭೀರ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಇಲಾಖೆಯೂ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದು, ಮೌನವಾಗಿದೆ' ಎಂದಿದ್ದಾರೆ.
ಕೆಲವು ವರದಿಗಳ ಪ್ರಕಾರ, ಮಥುರಾದಲ್ಲಿ ಕಲಬೆರಕೆ 'ಖೋವಾ' ಮಾರಾಟ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರವು ತಕ್ಷಣವೇ ಈ ಪ್ರಕರಣದ ತನಿಖೆ ನಡೆಸಬೇಕು' ಎಂದು ಆಗ್ರಹಿಸಿದ್ದಾರೆ. ವರದಿಯ ಮೂಲ ತಿಳಿಸಲು ಅವರು ನಿರಾಕರಿಸಿದ್ದಾರೆ.