HEALTH TIPS

ಸಾಧಕರ ಜೀವನ ನಮಗೆ ಮಾದರಿ : ಕೃಷ್ಣ ಪ್ರಸಾದ್ ಅಡ್ಯಂತಾಯ

       ಪೆರ್ಲ: ಒಂದು ಊರಿನ ಬೆಳವಣಿಗೆಯಲ್ಲಿ ಅಲ್ಲಿನ ವಿದ್ಯಾ ಸಂಸ್ಥೆ ಪ್ರಮುಖ ಪಾತ್ರ ವಹಿಸುತ್ತದೆ. ಅಲ್ಲಿನ ಪ್ರತಿಯೊಂದು ವ್ಯವಸ್ಥೆ ಕೂಡ ಆ ಶಾಲೆಗೆ ಅನುಗುಣವಾಗಿರುತ್ತದೆ. ಆ ನಿಟ್ಟಿನಲ್ಲಿ ಕಾಟುಕುಕ್ಕೆ ಶಾಲೆ ಹಾಗೂ ಶಾಲೆಯ ಸ್ಥಾಪಕÀ ಶಂಕರ ಮೋಹನದಾಸ ಆಳ್ವರು ಊರಿನ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಈ ಸಾಧಕರ ಜೀವನ ನಮಗೆ ಮಾದರಿಯಾಗಬೇಕು ಎಂದು ಕೃಷ್ಣ ಪ್ರಸಾದ ಅಡ್ಯಂತಾಯ ಅವರು ಹೇಳಿದರು. 

         ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರಗಿದ ಸಂಸ್ಥೆಯ ಸ್ಥಾಪಕ ಶಂಕರ ಮೋಹನದಾಸ ಆಳ್ವರ ಸಪ್ತಮ ಸಂಸ್ಮರಣೆ ಹಾಗೂ ಕುಂಬಳೆ ಗಾಂಧಿ ಬಿ.ದೇವಪ್ಪ ಆಳ್ವರ ಜೀವನ ಚರಿತ್ರೆಯ ಕುರಿತು ನಡೆದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

         ತಂದೆ ಮತ್ತು ಮಗ ಇಬ್ಬರ ಜೀವನವು ಎಲ್ಲರಿಗೂ ಆದರ್ಶ. ಅವರ ಜೀವನದ ಆದರ್ಶಗಳನ್ನು ನಾವು ರೂಡಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು. 

          ಮುಖ್ಯ ಅತಿಥಿಯಾಗಿದ್ದ ಕೃಷ್ಣ ಭಟ್ ಪಿಲಿಂಗಲ್ಲು ಅವರು ಮಾತನಾಡಿ ವಿದ್ಯಾಭ್ಯಾಸ ಹಾಗೂ ಶಾಲೆ ಒಬ್ಬ ಮನುಷ್ಯನ ಜೀವನದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಮಾನವರ ಬದುಕಿನ ಗುರಿಗಳನ್ನು ಹಾಗೂ ಆದರ್ಶಗಳನ್ನು ಶಾಲೆ ನಿರ್ಧರಿಸುತ್ತದೆ ಎಂದು ಹೇಳಿದರು.

            ಕಾರ್ಯಕ್ರಮದ ಆರಂಭದಲ್ಲಿ ಶಂಕರ ಮೋಹನದಾಸ ಆಳ್ವ ಹಾಗೂ ಕುಂಬಳೆ ಗಾಂಧಿ ಬಿ.ದೇವಪ್ಪ ಆಳ್ವರ ಭಾವಚಿತ್ರಕ್ಕೆ ಅತಿಥಿಗಳು ಪುಷ್ಪ ನಮನ ಸಲ್ಲಿಸಿದರು. ಶಾಲಾ ಎನ್‍ಸಿಸಿ ಘಟಕದಿಂದಲೂ ಪುಷ್ಪಾರ್ಚನೆ ನಡೆಯಿತು. ಶಾಲಾ ಪ್ರಾಂಶುಪಾಲ ಪದ್ಮನಾಭ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಸಂಜೀವ ರೈ, ಕುಂಬಳೆ ಗಾಂಧಿ ದೇವಪ್ಪ ಆಳ್ವರ ದತ್ತಿನಿಧಿ ಸ್ಥಾಪಕ ರೂವಾರಿ ರಾಮಕೃಷ್ಣ ಶಿವಪ್ರಸಾದ್ ಆಳ್ವ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸುಧಾಕರ ಕಲ್ಲಗದ್ದೆ, ಆಡಳಿತ ಮಂಡಳಿಯ ಸದಸ್ಯ ಬಿ.ಎಸ್.ಗಾಂಭೀರ್, ಸುಬ್ರಹ್ಮಣ್ಯೇಶ್ವರ ಹೈಸ್ಕೂಲ್ ಕಾಟುಕುಕ್ಕೆ ಇದರ ಮುಖ್ಯೋಪಾಧ್ಯಾಯ ಹರಿಪ್ರಸಾದ್ ಶೆಟ್ಟಿ ಮೊದಲಾದವರು ಶುಭಾಶಂಸನೆಗೈದರು. ಅಧ್ಯಾಪಕ ಸುರೇಶ್ ಕೆ. ಕುಂಬಳೆ ಗಾಂಧಿಯ ಕುರಿತು ಮಾತನಾಡಿದರು. ಕುಂಬಳೆ ಗಾಂಧಿ ಬಿ.ದೇವಪ್ಪ ಆಳ್ವರ ದತ್ತಿನಿಧಿಯ ಅಂಗವಾಗಿ ಕಾಸರಗೋಡು ಜಿಲ್ಲೆಯ ಶಾಲೆಗಳ ಮಕ್ಕಳಿಗೆ ನಡೆದ ಕುಂಬಳೆ ಗಾಂಧಿ ದೇವಪ್ಪ ಆಳ್ವ ಎಂಬ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು. ಸಂಸ್ಥೆಯ ಸಂಚಾಲಕ ಮಿತ್ತೂರು ಪುರುಷೋತ್ತಮ ಭಟ್ ಅಧ್ಯಕ್ಷತೆ ವಹಿಸಿದ್ದರು.

           ಆಡಳಿತ ಮಂಡಳಿಯ ಸದಸ್ಯ ಶಿವರಾಂ ಭಟ್, ವಿನೋಧ ಶೆಟ್ಟಿ ದಂಬೆಕಾನ, ಸಂದೇಶ್ ರೈ, ದೇವಪ್ರಸಾದ ಆಳ್ವ, ಲಕ್ಷ್ಮೀನಾರಾಯಣ ಶೆಟ್ಟಿ, ಸಂಕಪ್ಪ ಶೆಟ್ಟಿ, ರಮಾನಂದ ರೈ, ಕಾನ ಈಶ್ವರ ಭಟ್, ನಿವೃತ್ತ ಅಧ್ಯಾಪಕಿ ಸರಸ್ವತಿ ಪ್ರಸನ್ನ, ನಾರಾಯಣನ್, ಮಾತೃ ಸಂಘದ ಅಧ್ಯಕ್ಷೆ ಆಯಿಷ, ರಘುರಾಮ ರೈ, ಶಾಲಾ ಅಧ್ಯಾಪಕರು ಹಾಗೂ ಸಿಬ್ಬಂದಿ ವರ್ಗ ಮೊದಲಾದವರು ಉಪಸ್ಥಿತರಿದ್ದರು. ಆಡಳಿತ ಮಂಡಳಿಯ ಸದಸ್ಯ ಲೋಕನಾಥ ಶೆಟ್ಟಿ ಸ್ವಾಗತಿಸಿ, ಅಧ್ಯಾಪಕ ಮಹೇಶ್ ಏತಡ್ಕ ವಂದಿಸಿದರು. ಅಧ್ಯಾಪಿಕೆ ವಾಣಿ ಕೆ. ನಿರೂಪಿಸಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries