ಬಾಲೇಶ್ವರ: ಸೀಮಿತ ವ್ಯಾಪ್ತಿಯ ಎರಡು ವಾಯು ಕ್ಷಿಪಣಿಗಳ ಪ್ರಯೋಗವನ್ನು ಒಡಿಶಾದ ತೀರ ಪ್ರದೇಶವಾದ ಚಾಂಡಿಪುರದಲ್ಲಿರುವ ಅಂತರ್ಗತ ಪರೀಕ್ಷಾ ವಲಯದಿಂದ ಯಶಸ್ವಿಯಾಗಿ ನಡೆಸಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಬಾಲೇಶ್ವರ: ಸೀಮಿತ ವ್ಯಾಪ್ತಿಯ ಎರಡು ವಾಯು ಕ್ಷಿಪಣಿಗಳ ಪ್ರಯೋಗವನ್ನು ಒಡಿಶಾದ ತೀರ ಪ್ರದೇಶವಾದ ಚಾಂಡಿಪುರದಲ್ಲಿರುವ ಅಂತರ್ಗತ ಪರೀಕ್ಷಾ ವಲಯದಿಂದ ಯಶಸ್ವಿಯಾಗಿ ನಡೆಸಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಡಿಆರ್‌ಡಿಒ ಹಾಗೂ ನೌಕಾ ದಳದ ತಜ್ಞರು ಕ್ಷಿಪಣಿಗಳ ಪ್ರಯೋಗದಲ್ಲಿ ಪಾಲ್ಗೊಂಡರು.
ಈ ಕುರಿತು ಪ್ರಕಟಣೆ ಹೊರಡಿಸಿರುವ ಡಿಆರ್‌ಡಿಒ, 'ಸೆ. 12 ಹಾಗೂ 13ರಂದು ಪರೀಕ್ಷೆ ನಡೆಸಲಾಯಿತು. ನೆಲದಿಂದ ಚಿಮ್ಮಿ ಆಕಾಶದಲ್ಲಿನ ಗುರಿಯನ್ನು ನಿಖರವಾಗಿ ನಾಶ ಮಾಡುವ ಕ್ಷಿಪಣಿಯ ಸಾಮರ್ಥ್ಯವನ್ನು ಈ ಪರೀಕ್ಷೆ ದೃಢಪಡಿಸಿತು' ಎಂದು ತಿಳಿಸಿದೆ.
'ಕಡಿಮೆ ಎತ್ತರದಲ್ಲಿ ಅತಿ ವೇಗದಲ್ಲಿ ಗುರಿಯನ್ನು ತಲುಪುವಲ್ಲಿ ಎರಡೂ ಕ್ಷಿಪಣಿಗಳು ಯಶಸ್ವಿಯಾಗಿವೆ. ಸುರಕ್ಷತಾ ದೃಷ್ಟಿಯಿಂದ, ಪರೀಕ್ಷಾ ವಲಯದಿಂದ 2.5 ಕಿ.ಮೀ. ಸುತ್ತಳತೆ ವ್ಯಾಪ್ತಿಯಲ್ಲಿರುವ ಆರು ಗ್ರಾಮಗಳ 3,100 ನಿವಾಸಿಗಳನ್ನು ಬಾಲೇಶ್ವರ ಜಿಲ್ಲಾಡಳಿತ ಸ್ಥಳಾಂತರಗೊಳಿಸಿತ್ತು.