HEALTH TIPS

ಬದಿಯಡ್ಕ, ಹೊಸದುರ್ಗ ಠಾಣೆಯಲ್ಲಿ ಪೋಕ್ಸೋ ಕೇಸು-ಇಬ್ಬರ ಬಂಧನ

ಕಾಸರಗೋಡು: ಬದಿಯಡ್ಕ ಹಾಗೂ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ. ಬಾಲಕನಿಗೆ ಸಲಿಂಗ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಶೇಣಿ ಸನಿಹದ ಮಣಿಯಂಪಾರೆ ನಿವಾಸಿ ಸವಾದ್(26) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಪ್ಲಸ್ ವನ್ ವಿದ್ಯಾರ್ಥಿಯನ್ನು ಬೈಕಲ್ಲಿ ಕರೆದೊಯ್ದು ಎರಡು ಬಾರಿ ಸಲಿಂಗ ಕಿರುಕುಳ ನೀಡಿರುವ ಬಗ್ಗೆ ಲಭಿಸಿದ ದೂರಿನನ್ವಯ ಸವಾದ್ ವಿರುದ್ಧ ಪೋಕ್ಸೋ ಅನ್ವಯ ಕೇಸು ದಾಖಲಿಸಲಾಗಿತ್ತು. 

ಇನ್ನೊಂದು ಪ್ರಕರಣದಲ್ಲಿ ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂಬತ್ತರ ಹರೆಯದ ಬಾಲಕಿಯೊಬ್ಬಳ, ಮಲತಂದೆ 45ರ ಹರೆಯದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈತ ತನ್ನ ಮೊದಲ ಪತ್ನಿಯ 9ರ ಹರೆಯದ ಪುತ್ರಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಈತನನ್ನು ಬಂಧಿಸಲಾಗಿದೆ. ಬಾಲಕಿ ಒಂದನೇ ತರಗತಿಯಲ್ಲಿರುವಾಗಲೇ ಕಿರುಕುಳ ನೀಡುತ್ತಿದ್ದು, ಭಯದಿಂದ ಬಾಲಕಿ ಯಾರಲ್ಲೂ ಬಾಯಿ ಬಿಟ್ಟಿರಲಿಲ್ಲ. ಕೆಲವುದಿವಸಗಳ ಹಿಂದೆ ಮತ್ತೆ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಬಾಲಕಿ ವಿಷಯ ಬಹಿರಂಗಪಡಿಸಿದ್ದಳು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries