HEALTH TIPS

ಭಾರತ-ಚೀನಾ ಗಡಿ ವಿವಾದದ ಬಗ್ಗೆ ಸುಳ್ಳು ಹೇಳುತ್ತಿರುವ ಮೋದಿ, ಶಾ: ಸುಬ್ರಮಣಿಯನ್

 ವದೆಹಲಿ: 'ಭಾರತ-ಚೀನಾ ಗಡಿ ವಿವಾದದ ಬಗ್ಗೆ ಸುಳ್ಳು ಹೇಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ದೇಶದ್ರೋಹಕ್ಕೆ ಗುರಿಯಾಗುತ್ತಾರೆ' ಎಂದು ಬಿಜೆಪಿ ನಾಯಕ ಮತ್ತು ಮಾಜಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಕಿಡಿಕಾರಿದ್ದಾರೆ.

ಈ ಕುರಿತಂತೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, '2020ರ ಏಪ್ರಿಲ್‌ನಿಂದ ಚೀನಾ 4,046 ಚದರ ಕಿಲೋ ಮೀಟರ್ ವಿವಾದಿತ ಲಡಾಖ್ ಪ್ರದೇಶವನ್ನು ವಶಪಡಿಸಿಕೊಂಡಿದೆ.

ಆದರೆ, ಈ ಜೋಡಿ ಮಾತ್ರ 'ಯಾರೂ ಬಂದಿಲ್ಲ' ಎಂಬ ಸುಳ್ಳನ್ನೇ ಹೇಳಿಕೊಂಡು ಬಂದಿದೆ' ಎಂದು ಹೇಳಿದರು.


'ಭಾರತ-ಚೀನಾ ಗಡಿ ವಿವಾದ ಸಂಬಂಧ ಸತ್ಯ ಹೊರಬಿದ್ದರೆ ತಾವು ದೇಶದ್ರೋಹ ಆರೋಪಕ್ಕೆ ಗುರಿಯಾಗುತ್ತೇವೆ ಎಂಬುದು ಅವರಿಗೆ (ಮೋದಿ ಮತ್ತು ಅಮಿತ್‌ ಶಾ) ತಿಳಿದಿರಲಿ' ಎಂದು ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries