HEALTH TIPS

ಕ್ಯಾರೆಟ್​ ತಿನ್ನುವುದರಿಂದ ಏನೆಲ್ಲ ಉಪಯೋಗ?; ಇಲ್ಲಿದೆ ಅಚ್ಚರಿಯ ಸಂಗತಿ

 ಕ್ಯಾರೆಟ್ ಬಣ್ಣದಲ್ಲಿ ಆಕರ್ಷಕ, ತಿನ್ನಲು ರುಚಿಕರ, ಪೋಷಕಾಂಶಗಳ ಆಗರ. ಅದನ್ನು ಇಷ್ಟಪಡಲು ಇನ್ನೇನು ಕಾರಣಬೇಕು ಅಲ್ಲವೇ? ನಮ್ಮ ಆರೋಗ್ಯ ಮತ್ತು ಸೌಂದರ್ಯಕ್ಕೆ ಕ್ಯಾರೆಟ್ ಸದಾ ಸಹಕಾರಿ.

ಮುದುಕರಿಂದ ಮಕ್ಕಳ ವರೆಗೆ ಅಚ್ಚುಮೆಚ್ಚಿನ ತರಕಾರಿ ಕ್ಯಾರೆಟ್ ಬೆಳೆಯಲು ಸುಲಭ ಮತ್ತು ಆರೋಗ್ಯಕ್ಕೂ ಲಾಭದಾಯಕ.

ಮಕ್ಕಳ ಆರೋಗ್ಯಕ್ಕಂತೂ ಕ್ಯಾರೆಟ್ ಬಹಳ ಅಗತ್ಯ. ಯಾಕಂತೀರಾ? ಇಲ್ಲಿದೆ ಒಂದಿಷ್ಟು ಮಾಹಿತಿ.

ಕ್ಯಾರೆಟ್‍ನಲ್ಲಿರುವ ಪೋಷಕಾಂಶಗಳು

ಕ್ಯಾರೆಟಿನಲ್ಲಿ ಮಕ್ಕಳ ಬೆಳವಣಿಗೆಗೆ ಅಗತ್ಯ ಪೋಷಕಾಂಶವಾಗಿರುವ ಬೀಟಾ-ಕೆರೋಟಿನ್ ಇದೆ. ಅದು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಮಾತ್ರವಲ್ಲ ಅದರಲ್ಲಿ ಆಯಂಟಿ ಏಜಿಂಗ್ ಅಂಶಗಳು ಕೂಡ ಇವೆ.

ಬೀಟಾ ಕೆರೋಟಿನ್ ದೇಹದಲ್ಲಿ ವಿಟಮಿನ್ ಎ ಆಗಿ ಪರಿವರ್ತನೆಗೊಳ್ಳುತ್ತದೆ ಮತ್ತು ಇರುಳಿನ ದೃಷ್ಟಿ ಸಕ್ರಿಯಗೊಳ್ಳಲು ಅದು ಅತ್ಯಾವಶ್ಯಕ.

ಕ್ಯಾರೆಟಿನಲ್ಲಿ ಥೈಮಿನ್, ನಿಯಾಸಿನ್ ಮತ್ತು ವಿಟಮಿನ್ ಬಿ6 ಇದೆ.• ಕ್ಯಾರೆಟ್‍ನಲ್ಲಿರುವ ಡಯೆಟರಿ ಫೈಬರ್, ಸಕ್ಕರೆ ರಕ್ತ ಪ್ರವಾಹಕ್ಕೆ ಹೀರಿಕೊಳ್ಳುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ.

ಕ್ಯಾರೆಟ್‍ನಲ್ಲಿ ವಿಟಮಿನ್ ಸಿ, ಕೆ ಮತ್ತು ಮ್ಯಾಂಗನೀಸ್ ಹಾಗೂ ಕ್ಯಾಲ್ಸಿಯಂ, ಕಬ್ಬಿಣಾಂಶ, ಪೊಟಾಶಿಯಂ, ಕಾಪರ್, ಪ್ರಾಸ್ಪರಸ್‍ನಂತಹ ಮಿನರಲ್ಸ್‍ಗಳು ಇವೆ.

ನಿರ್ದಿಷ್ಟ ವಿಧದ ಕ್ಯಾನ್ಸರ್‍ಗಳ ವಿರುದ್ಧ ಹೋರಾಡಲು ಸಹಾಯ ಮಾಡಬಲ್ಲ ಫಾಲ್‍ಕ್ಯಾರಿನೋಲ್ ಎಂಬ ಆಯಂಟಿಆಕ್ಸಿಡೆಂಟ್ ಇದೆ ಎಂಬುವುದು ನ್ಯೂ ಕ್ಯಾಸಲ್ ವಿಶ್ವ ವಿದ್ಯಾನಿಲಯದ ಅಧ್ಯಯನದಿಂದ ತಿಳಿದು ಬಂದಿದೆ.

ಕ್ಯಾರೆಟ್‍ನಿಂದ ಆರೋಗ್ಯಕ್ಕೆ ಪ್ರಯೋಜನಗಳೇನು?

ಕ್ಯಾರೆಟ್‍ನಲ್ಲಿ ತರಾವರಿ ಪೋಷಕಾಂಶಗಳು ಇವೆ ಎಂಬುದೇನೋ ನಿಜ, ಆದರೆ ಅದರಿಂದ ಮಕ್ಕಳ ಆರೋಗ್ಯಕ್ಕೆ ಯಾವ ರೀತಿ ಪ್ರಯೋಜನ ಆಗಬಹುದು? ಮಕ್ಕಳಿಗೆ ಮತ್ತು ದೊಡ್ಡವರ ಆರೋಗ್ಯಕ್ಕೆ ಕ್ಯಾರೆಟಿನಿಂದ ಆಗುವ ಪ್ರಯೋಜನಗಳು ಇಂತಿವೆ.

1. ದೃಷ್ಟಿಗೆ ಒಳ್ಳೆಯದು

ಕ್ಯಾರೆಟ್ ವಿಟಮಿನ್ ಎ ಯ ಆಗರ. ವಿಟಮಿನ್ ಎ ಕಣ್ಣಿನ ದೃಷ್ಟಿಗೆ ತುಂಬಾ ಒಳ್ಳೆಯದು. ನಿತ್ಯವೂ ಕ್ಯಾರೆಟ್ ತಿನ್ನುವುದರಿಂದ ಇರುಳುಗಣ್ಣು ಸೇರಿದಂತೆ ದೃಷ್ಟಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಂದ ದೂರವಿರಬಹುದು ಮಾತ್ರವಲ್ಲ, ಅದು ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ.

2. ಅಕ್ಷಿಪಟಲದ ಸಮಸ್ಯೆ ನಿವಾರಣೆ

ನಿತ್ಯವೂ ಕ್ಯಾರೆಟ್ ತಿನ್ನುವುದರಿಂದ ಮಕ್ಕಳಲ್ಲಿ ಅಕ್ಷಿಪಟಲದ ಸಮಸ್ಯೆ ನಿವಾರಣೆಯಾಗುತ್ತದೆ. ಕ್ಯಾರೆಟ್‍ನಲ್ಲಿರುವ ಬೀಟಾ ಕೆರೊಟಿನ್ ದೃಷ್ಟಿಯನ್ನು ಉತ್ತಮ ಹಾಗೂ ತೀಕ್ಷ್ಣಗೊಳಿಸಲು ಸಹಕಾರಿ.

3. ಆರೋಗ್ಯಕರ ಚರ್ಮ

ಕ್ಯಾರೆಟ್‍ನಲ್ಲಿರುವ ಬೀಟಾ ಕ್ಯಾರೋಟಿನ್ ಚರ್ಮಕ್ಕೆ ಹೊಳಪನ್ನು ನೀಡಿದರೆ, ಅದರಲ್ಲಿರುವ ವಿಟಮಿನ್ ಎ ಮತ್ತು ಆಯಂಟಿ ಆಕ್ಸಿಡೆಂಟ್‍ಗಳು ಸೂರ್ಯನ ಕಿರಣಗಳಿಂದ ನಮ್ಮ ಚರ್ಮಕ್ಕಾಗುವ ಅಪಾಯಗಳಿಂದ ರಕ್ಷಿಸುತ್ತದೆ.

4. ಜೀರ್ಣಕ್ರೀಯೆಯನ್ನು ವೃದ್ಧಿಸುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ

ಕ್ಯಾರೆಟ್‍ನಲ್ಲಿರುವ ಅಧಿಕ ಡಯೆಟರಿ ಫೈಬರ್, ಜೀರ್ಣಕ್ರಿಯೆಯನ್ನು ವೃದ್ಧಿಸುತ್ತದೆ, ಮಲಬದ್ಧತೆ ಹಾಗೂ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ.

5. ಅತಿಸಾರವನ್ನು ಗುಣಪಡಿಸುತ್ತದೆ

ಮಕ್ಕಳಲ್ಲಿನ ಅತಿಸಾರವನ್ನು ಕ್ಯಾರೆಟ್ ಬಹುಬೇಗನೆ ಮತ್ತು ಪರಿಣಾಮಕಾರಿಯಾಗಿ ಗುಣಪಡಿಸುತ್ತದೆ. ಅದಕ್ಕಾಗಿ, ದಿನಕ್ಕೆ ಹಲವು ಬಾರಿ ಕ್ಯಾರೆಟ್ ಸೂಪ್ ಅಥವಾ ಜ್ಯೂಸ್ ಕುಡಿಯಿರಿ.

6. ಕರುಳಿನ ಜಂತುಗಳನ್ನು ನಿವಾರಿಸುತ್ತದೆ

ಕ್ಯಾರೆಟ್ ತಿನ್ನುವುದರಿಂದ, ಕರುಳಿನ ಜಂತು ಹುಳಗಳಿಂದ ಹೊಟ್ಟೆಯಲ್ಲಿ ಉಂಟಾಗುವ ಸಮಸ್ಯೆಗಳಿಂದ ಪಾರಾಗಬಹುದು.

7. ನೆನಪಿನಶಕ್ತಿ ಹೆಚ್ಚಿಸುತ್ತದೆ

ಕ್ಯಾರೆಟ್‍ಗಳು ಅರಿವಿನ ಬೆಳಲವಣಿಗೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತವೆ. ಅದರಲ್ಲಿರುವ ಲುಟಿಯೋಲಿನ್ ಎಂಬ ಸಂಯುಕ್ತ ,ಮೆದುಳಿನ ಉರಿಯೂತ ಮತ್ತು ವಯಸ್ಸಾದಂತೆ ಕ್ರಮೇಣ ಬರುವ ಮರೆವನ್ನು ತಡೆಯುತ್ತದೆ.

8. ದೇಹವನ್ನು ಶುದ್ಧೀಕರಿಸುತ್ತದೆ

ಲಿವರ್‍ನಿಂದ ಕೆಟ್ಟ ಕೊಲೆಸ್ಟ್ರಾಲ್ ಮತ್ತು ಕೊಬ್ಬನ್ನು ನಿವಾರಿಸಲು ಹಾಗೂ ದೇಹದಲ್ಲಿನ ವಿಷಕಾರಿ ಅಮಶಗಳನ್ನು ಹೊರ ಹಾಕಲು ಕ್ಯಾರೆಟ್ ಸಹಕರಿಸುತ್ತದೆ.

9. ಹಲ್ಲಿನ ಆರೋಗ್ಯ ಕಾಪಾಡುತ್ತದೆ

ಊಟವಾದ ಬಳಿಕ ಹಸಿ ಕ್ಯಾರೆಟ್ ಜಗಿಯಿರಿ, ಹಲ್ಲನ್ನು ಅವು ಸ್ವಚ್ಚಗೊಳಿಸುತ್ತವೆ ಮತ್ತು ದುರ್ವಾಸನೆಯನ್ನು ನಿವಾರಿಸುತ್ತವೆ. ಹಲ್ಲು ಹುಳುಕಾಗಂತೆ ತಡೆಯುತ್ತವೆ .

ಅಷ್ಟೇ ಅಲ್ಲ, ಕ್ಯಾರೆಟ್ ತಿನ್ನುವುದರಿಂದ, ಕ್ಯಾನ್ಸರ್, ಹೃದ್ರೋಗಗಳು ಮತ್ತು ಪಾರ್ಶ್ವವಾಯುವಿನಂತಹ ಅಪಾಯಗಳಿಂದ ರಕ್ಷಿಸಿಕೊಳ್ಳಬಹುದು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries