ಉಪ್ಪಳ: ಮುಳಿಜ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಹಾರ ಮೇಳ ನಡೆಯಿತು. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತಾವೇ ತಯಾರಿಸಿದ ವಿವಿಧ ತಿಂಡಿತಿನಸುಗಳ ಆಹಾರ ವಸ್ತುಗಳ ಫುಡ್ ಫೆಸ್ಟ್‍ನ್ನು ಮಂಗಲ್ಪಾಡಿ ಗ್ರಾಮ ಪಂಚಾಯತಿ ಸದಸ್ಯ ಅಬ್ದುಲ್ ರೆಹಮಾನ್ ಟಿ.ಎಮ್ ಸ್ವಾದಿಷ್ಟ ಆಹಾರ ವಸ್ತುಗಳನ್ನು ವಿದ್ಯಾರ್ಥಿಗಳಿಗೆ ನೀಡುವುದರ ಮೂಲಕ ಉದ್ಘಾಟಿಸಿದರು.
ಮಂಜೇಶ್ವರ ಬಿ.ಆರ್.ಸಿ ಯ ಬಿ.ಪಿ.ಒ ಜಾಯ್ ಅವರು ಉತ್ತಮ ರುಚಿಕರ ಶುದ್ಧ ಘಮಘಮ ಪರಿಮಳವಿರುವ ಮನೆಯಲ್ಲಿ ಮಾಡಿದ ಆಹಾರ ವಸ್ತುಗಳನ್ನು ಹಿತಮಿತವಾಗಿ ಬಳಸಿ ಅನಾರೋಗ್ಯದಿಂದ ದೂರವಿರಿ ಎಂಬ ಸಂದೇಶ ನೀಡಿದರು. ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ ಶಾಲಾ ಮುಖ್ಯ ಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ಅವರು ನಮಗೆ ಆಹಾರ ಯಾಕೆ ಬೇಕೆಂದು ಹೇಳುತ್ತಾ ಆಹಾರ ವೈವಿಧ್ಯತೆಯನ್ನು ತಿಳಿಸಿಕೊಟ್ಟರು. ಪ್ರಾಸ್ತಾವಿಕ ನುಡಿಗಳನ್ನಾಡಿದ ಶಿಕ್ಷಕಿ ಧನ್ಯ ಪಿ.ವಿ ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ ಆದ್ದರಿಂದ ಕಸ ತಿನ್ನುವುದಕ್ಕಿಂತ ತುಸು ತಿಂದು ವ್ಯಾಯಾಮ ಮಾಡಿ ವಿಶ್ರಾಂತಿ ಪಡೆದು ಆರೋಗ್ಯ ಕಾಪಾಡಿ ಎಂದರು.
ಬಿ.ಆರ್.ಸಿ.ಯ ಕ್ಲಸ್ಟರ್ ಸಂಯೋಜಕ ಬ್ರಿಜೇಶ್ ಅವರು ಮನೆಯ ಹಿತ್ತಲಲ್ಲಿ ಬೆಳೆದ ವಸ್ತುಗಳನ್ನೇ ಉಪಯೋಗಿಸಿ ನಾವೇ ನಮ್ಮ ಮನೆಯಲ್ಲಿ ತಯಾರಿಸಿದ ತಿಂಡಿಗಳನ್ನು ಬಳಸಿ ಎಂಬ ಹಿತ ನುಡಿಗಳನ್ನಾಡಿದರು. ಶಾಲಾ ಹಿರಿಯ ಶಿಕ್ಷಕ ರಿಯಾಜ್ ಎಂ.ಎಸ್ ಪೆರಿಂಗಡಿ ಅವರು ನಿರ್ವಹಿಸಿದ ಈ ಕಾರ್ಯಕ್ರಮಕ್ಕೆ ಶಿಕ್ಷಕಿ ಕಾವ್ಯ ಸ್ವಾಗತಿಸಿ ಫಾತಿಮತ್ ಫಝೀನ ವಂದಿಸಿದರು.