ಕುಂಬಳೆ: ಮಾದಕ ವ್ಯಸನದ ವಿರುದ್ಧ ಕಟ್ಟುನಿಟ್ಟಿನ ನಿಲುವು ತಳೆದು ರೂಪುಗೊಂಡ ಅಡ್ಕದ ಮಾದಕ ವಸ್ತು ವಿರೋಧಿ ಸಂಘದ ಪ್ರಥಮ ವಾರ್ಷಿಕೋತ್ಸವ ವಿಸ್ತೃತ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುವುದು ಎಂದು ಸಂಬಂಧಪಟ್ಟವರು ಕುಂಬಳೆ ಪ್ರೆಸ್ ಪೋರಂನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಕ್ಟೋಬರ್ 2 ರಂದು ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಅಡ್ಕ ಜಂಕ್ಷನ್ ನಲ್ಲಿ ಮಾದಕ ದ್ರವ್ಯ ವಿರೋಧಿ ರ್ಯಾಲಿ, ಜಾಗೃತಿ ತರಗತಿ ಹಾಗೂ ಹೋರಾಟದ ಪ್ರಥಮ ವರ್ಷಾಚರಣೆ ಸ್ಮರಣಾರ್ಥ ಆಯೋಜಿಸಿರುವ ಸಾರ್ವಜನಿಕ ಸಭೆ ನಡೆಯಲಿದೆ.
ಅಪರಾಹ್ನ 3 ಕ್ಕೆ ಬಂದ್ಯೋಡಿನಿಂದ ಆರಂಭವಾಗುವ ಮಾದಕ ವಸ್ತು ವಿರೋಧಿ ರ್ಯಾಲಿಯನ್ನು ಅಧ್ಯಕ್ಷ ಓ.ಕೆ.ಇಬ್ರಾಹಿಂ ಉದ್ಘಾಟಿಸುವರು. ಅಡ್ಕ ಜಂಕ್ಷನ್‍ನಲ್ಲಿ ರ್ಯಾಲಿ ಸಮಾರೋಪಗೊಳ್ಳಲಿದೆ.ಸಾರ್ವಜನಿಕ ಸಭೆಯನ್ನು ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್
ಉದ್ಘಾಟಿಸುವರು. ಮಂಜೇಶ್ವರಂ ಶಾಸಕ ಎ.ಕೆ. ಎಂ ಅಶ್ರಫ್ ಅಧ್ಯಕ್ಷತೆ ವಹಿಸುವರು. ಕಾಸರಗೋಡು ಜಿಲ್ಲಾ ಪೋಲೀಸ್ ಮುಖ್ಯಸ್ಥೆ ಡಿ. ಶಿಲ್ಪಾ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸಹಾಯಕ ಅಬಕಾರಿ ನಿರೀಕ್ಷಕ ರಘುನಾಥ್ ಪ್ರಧಾನ ಭಾಷಣ ಮಾಡಲಿದ್ದು, ರಾಜಕೀಯ, ಸಾಮಾಜಿಕ, ಸಾಂಸ್ಕøತಿಕ ಹಾಗೂ ಧಾರ್ಮಿಕ ಮುಖಂಡರು ಪಾಲ್ಗೊಳ್ಳುವರು.
ಸುದ್ದಿಗೋಷ್ಠಿಯಲ್ಲಿ ಬಿ.ಎಂ.ಪಿ ಅಬ್ದುಲ್ಲಾ, ಉಮ್ಮರ್ ರಾಜ, ಮೊಯ್ದೀನ್, ಸಿ.ಐ.ಮೂಸಕುಂಞÂ್ಞ, ಶಾಹುಲ್ ಹಮೀದ್ ಹಾಗೂ ಮೂಸ ಅಡ್ಕ ಉಪಸ್ಥಿತರಿದ್ದು ಮಾಹಿತಿ ನೀಡಿದರು.