ಕಾಸರಗೋಡು : ಆಧ್ಯಾತ್ಮಿಕ, ಸಾಂಸ್ಕøತಿಕ ವಿಚಾರಗಳ ಜತೆಗೆ ಕೃಷಿ ಸಂಸ್ಕೃತಿಯನ್ನು ಯುವಜನತೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಮಕ್ಕಳಲ್ಲಿ ಸಾಹಿತ್ಯದ ಜತೆಗೆ ಕೃಷಿಯ ಕುರಿತು ಜಾಗೃತಿ ಮೂಡಿಸಬೇಕು ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.
ಅವರು ಎಡನೀರು ಮಠದಲ್ಲಿ ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ಕಾಸರಗೋಡು ಜಿಲ್ಲಾ ಘಟಕದ ಆಶ್ರಯದಲ್ಲಿ 2024 ಸೆಪ್ಟೆಂಬರ್ 15ರಂದು ಕಾಸರಗೋಡಿನ ಕನ್ನಡ ಭವನ ಗ್ರಂಥಾಲಯದಲ್ಲಿ ನಡೆಯಲಿರುವ ಕೇರಳ- ಕರ್ನಾಟಕ ಸ್ಪಂದನ ಸಿರಿ ಕೃಷಿ, ಕನ್ನಡ ಶಿಕ್ಷಣ ಮತ್ತು ಸಂಸ್ಕೃತಿ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಸ್ಪಂದನ ಸಿರಿ ವೇದಿಕೆಯ ಗೌರವ ಸಲಹೆಗಾರ ಕೆ. ವಾಮನ್ ರಾವ್ ಬೇಕಲ್, ಸ್ಪಂದನ ಸಿರಿ ಜಿಲ್ಲಾ ಅಧ್ಯಕ್ಷ ವಿರಾಜ್ ಅಡೂರು, ಸಾಮಾಜಿಕ ಮುಖಂಡ ಕಾಸರಗೋಡು ವೆಂಕಟ್ರಮಣ ಹೊಳ್ಳ, ಸಂಗೀತ ವಿದ್ವಾಂಸ ಬಳ್ಳಪದವು ಯೋಗೀಶ ಶರ್ಮ, ಶ್ರೀಮಠದ ವ್ಯವಸ್ಥಾಪಕ ರಾಜೇಂದ್ರ ಕಲ್ಲೂರಾಯ, ರಾಘವೇಂದ್ರ ಕೆದಿಲಾಯ, ಸಾಹಿತಿ ವೆಂಕಟ್ ಭಟ್ ಎಡನೀರು, ಕನ್ನಡ ಭವನ ಪ್ರಕಾಶಕಿ ಸಂಧ್ಯಾರಾಣಿ ಟೀಚರ್, ಮೃದಂಗ ವಿದ್ವಾನ್ ಜಗದೀಶ ಡಿ ಕುರ್ತಕೋಡು ಉಪಸ್ಥಿತರಿದ್ದರು.