HEALTH TIPS

ವಿದ್ಯಾರ್ಥಿಗಳಿಗೆ ವಾಟ್ಸ್​ಆಯಪ್​ನಲ್ಲಿ ಮುದ್ರಿತ ನೋಟ್ಸ್​ ಕಳಿಸುವಂತಿಲ್ಲ! ಶಿಕ್ಷಣ ಇಲಾಖೆಗೆ ನಿಷೇಧ ಹೇರಿದೆ ಸರ್ಕಾರ

 ತಿರುವನಂತಪುರ: ಇಲ್ಲಿನ ಉನ್ನತ ಮಾಧ್ಯಮಿಕ ಶಿಕ್ಷಣ ನಿರ್ದೇಶನಾಲಯವು ವಿದ್ಯಾರ್ಥಿಗಳಿಗೆ ಮುದ್ರಿತ ಹಾಗೂ ಕೈಬರಹದ ನೋಟ್ಸ್​ಗಳನ್ನು ವಾಟ್ಸ್‌ಆಯಪ್ ಸೇರಿದಂತೆ ಇತರೆ ಪ್ಲಾಟ್​​ಫಾರ್ಮ್​ಗಳ ಮೂಲಕ ಕಳಿಸುವುದನ್ನು ನಿಷೇಧಿಸಿದೆ. ಈ ನಿರ್ದೇಶನವು ತರಗತಿಯ ಪರಿಸರದಲ್ಲಿ ಸಂಭವಿಸಬೇಕಾದ ಅಗತ್ಯ ಕಲಿಕೆಯ ಅನುಭವವನ್ನು ಕಾಪಾಡಿಕೊಳ್ಳುವ ಗುರಿಯನ್ನು ಹೊಂದಿರುವ ಹಿನ್ನೆಲೆಯಿಂದ ಜಾರಿಗೊಳಿಸಲಾಗಿದೆ ಎಂದು ಕೇರಳ ಸರ್ಕಾರ ತಿಳಿಸಿದೆ.

ಈ ಹಿಂದೆ ಮಕ್ಕಳು ತರಗತಿಯಲ್ಲಿ ಶಿಕ್ಷಕರು ಹೇಳಿಕೊಡುತ್ತಿದ್ದ ಪಠ್ಯವನ್ನು ಕ್ಲಾಸ್​ನಲ್ಲಿಯೇ ಕಲಿಯಬೇಕಾಗಿತ್ತು. ಅಂದರೆ, ತರಗತಿಯ ಬೋರ್ಡ್​ನಲ್ಲಿ ಬರೆಯಲಾದ ಪಾಠವನ್ನು ಅಲ್ಲಿಯೇ ನೋಟ್​ಬುಕ್​ನಲ್ಲಿ ಬರೆದುಕೊಳ್ಳುತ್ತಿದ್ದ ವಿದ್ಯಾರ್ಥಿಗಳು, ಅದನ್ನೇ ಓದಿ, ಪರೀಕ್ಷೆಗೆ ಹಾಜರಾಗುತ್ತಿದ್ದರು. ಆದ್ರೆ, ಇದೀಗ ಸಾಮಾಜಿಕ ಜಾಲತಾಣಗಳ ಪ್ರಭಾವ ಹೆಚ್ಚಾದ ಹಿನ್ನಲೆ ಶಿಕ್ಷಕರು ಮಕ್ಕಳಿಗೆ ಮುದ್ರಿತ ನೋಟ್ಸ್​ಗಳನ್ನು ವಾಟ್ಸ್​​ಆಯಪ್​ನಲ್ಲಿಯೇ ಕಳುಹಿಸುವ ಅಭ್ಯಾಸ ರೂಡಿಸಿಕೊಂಡಿದ್ದಾರೆ. ಸದ್ಯ ಇದನ್ನು ತಡೆಯುವ ನಿಟ್ಟಿನಲ್ಲಿ ಕೇರಳ ಸರ್ಕಾರ, ಸಾಮಾಜಿಕ ಮಾಧ್ಯಮದ ಮೂಲಕ ಅಧ್ಯಯನಕ್ಕೆ ಸಂಬಂಧಿಸಿದ ಯಾವುದೇ ನೋಟ್ಸ್​ಗಳನ್ನು ಕಳಿಸಬೇಡಿ, ಇದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದೆ.

ಹಿರಿಯ ಪ್ರಾಥಮಿಕ ಶೈಕ್ಷಣಿಕ ಜಂಟಿ ನಿರ್ದೇಶಕರಾದ ಸುರೇಶ್ ಕುಮಾರ್ ಅವರ ಆದೇಶದಂತೆ ಹೊಸ ನಿಯಮಾವಳಿಗಳ ಅನುಸರಣೆಯನ್ನು ಜಾರಿಗೊಳಿಸಲು ಶಾಲೆಗಳಿಗೆ ನಿಯಮಿತವಾಗಿ ಭೇಟಿ ನೀಡುವಂತೆ ಪ್ರಾದೇಶಿಕ ಉಪ ನಿರ್ದೇಶಕರಿಗೆ ಸೂಚಿಸಲಾಗಿದೆ. ಕೋವಿಡ್​-19ರ ಸಾಂಕ್ರಾಮಿಕ ಸಮಯದಲ್ಲಿ ಮಕ್ಕಳು ತರಗತಿಗಳಿಗೆ ಹಾಜರಾಗಲು ಸಾಧ್ಯವಾಗದ ಕಾರಣ ಆನ್‌ಲೈನ್ ಕಲಿಕೆಯ ವಿಧಾನಗಳಿಗೆ ಆದ್ಯತೆ ನೀಡುವ ಮುಖೇನ ಹೆಚ್ಚು ಪ್ರೋತ್ಸಾಹಿಸಲಾಯಿತು. ಇದನ್ನು ಖಂಡಿಸಿದ ಪೋಷಕರು ಮಕ್ಕಳ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ ಬೆನ್ನಲ್ಲೇ ಇದೀಗ ವಾಟ್ಸ್​ಆಯಪ್​ ಮೂಲಕ ನೋಟ್ಸ್​ಗಳನ್ನು ಕಳಿಸುವುದನ್ನು ನಿಷೇಧಿಸಲಾಗಿದೆ.

ವಿದ್ಯಾರ್ಥಿಗಳ ಮೇಲೆ ಅನಗತ್ಯ ಹೊರೆ ಮತ್ತು ಆರ್ಥಿಕ ಒತ್ತಡದ ಬಗ್ಗೆ ಕಳವಳ ವ್ಯಕ್ತಪಡಿಸಲಾಗಿತ್ತು. ಸದ್ಯ ಈ ಬೆಳವಣಿಗೆಯ ಬೆನ್ನಲ್ಲೇ ಇದೀಗ ಪ್ರಾಥಮಿಕ ಶಿಕ್ಷಣ ಇಲಾಖೆಗೆ ಆದೇಶ ಹೊರಡಿಸಿರುವ ಕೇರಳ ಸರ್ಕಾರ, ಪಠ್ಯಕ್ರಮಕ್ಕೆ ಸಂಬಂಧಿಸಿದಂತೆ ಶಿಕ್ಷಕರು ಮಕ್ಕಳಿಗೆ ಜಾಲತಾಣಗಳ ಮೂಲಕ ನೋಟ್ಸ್​ಗಳನ್ನು ಕಳಿಸುವುದನ್ನು ತಡೆಯಿರಿ ಎಂದು ಒತ್ತಿ ಹೇಳಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries