ಆಲಪ್ಪುಳ:85 ಶೇ.ಅಂಗವಿಕಲತೆ ಇರುವ ಮಗುವನ್ನು ಪರಿಪೋಷಿಸುವ ಶೇ.50 ಅಂಗವಿಕಲತೆ ಇರುವ ತಾಯಿಗೆ, ಹಾಸಿಹಿಡಿದಿರುವ ರೋಗಿಗನ್ನು ನೋಡಿಕೊಳ್ಳುವವರಿಗೂ ಆಶಾಕಿರಣ ಯೋಜನೆಯಡಿ ಸಕಾರ ನೀಡುವ ನೆರವನ್ನು ಬಡ್ಡಿ ಸಹಿತ ಕೂಡಲೇ ವಿತರಿಸಬೇಕು ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯೆ ವಿ.ಕೆ.ಬೀನಾಕುಮಾರಿ ಆದೇಶ ನೀಡಿದ್ದಾರೆ.
ಆಯೋಗವು ಕೇರಳ ಸಾಮಾಜಿಕ ಭದ್ರತಾ ಮಿಷನ್‍ನ ನಿರ್ದೇಶಕರಿಗೆ ಸೂಚನೆಗಳನ್ನು ನೀಡಿದೆ. ಆದೇಶದ ಆಧಾರದ ಮೇಲೆ ಕೈಗೊಂಡ ಕ್ರಮಗಳ ಕುರಿತು ಒಂದು ತಿಂಗಳೊಳಗೆ ಆಯೋಗಕ್ಕೆ ವರದಿ ಸಲ್ಲಿಸಬೇಕು.
ಚೇರ್ತಲ ಮೈತ್ತರ ನಿವಾಸಿ ಜಿ. ಅನಿತಾ ಸಲ್ಲಿಸಿದ್ದ ದೂರಿನ ತನಿಖೆ ನಡೆಸಿ ಈ ಆದೇಶ ನೀಡಿದೆ. ಅನಿತಾ ಅವರ ಮಗುವಿಗೆ ನೆರವು ನೀಡುವಂತೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಜಿಲ್ಲಾ ಸಾಮಾಜಿಕ ನ್ಯಾಯಾಧಿಕಾರಿ ಈ ಬಗ್ಗೆ ವರದಿ ಸಲ್ಲಿಸಿದ್ದರು. ಮಗುವಿಗೆ ಎದ್ದು ನಿಲ್ಲಲು ಸಾಧ್ಯವಾಗುತ್ತಿಲ್ಲ. ದೂರುದಾರರ ಪತಿಯೂ ಅಸ್ವಸ್ಥರಾಗಿದ್ದಾರೆ. ಕಳೆದ ಫೆ. 17ರಂದು ಕೇರಳ ಸಾಮಾಜಿಕ ಭದ್ರತಾ ಮಿಷನ್ ನಿರ್ದೇಶಕರಿಗೆ ಶಿಶು ಅಭಿವೃದ್ಧಿ ಅಧಿಕಾರಿ ಕಳುಹಿಸಿರುವ ಪತ್ರದಲ್ಲಿ ತಮ್ಮ ಅರ್ಜಿಯನ್ನು ಸಹಾನುಭೂತಿಯಿಂದ ಪರಿಗಣಿಸುವಂತೆ ಕೋರಿದ್ದರು. ಆದರೆ ಜಿಲ್ಲಾ ಸಾಮಾಜಿಕ ನ್ಯಾಯಾಧಿಕಾರಿಗಳು ಆಯೋಗಕ್ಕೆ ನೀಡಿರುವ ವರದಿಯಲ್ಲಿ ಅಂತಹ ಯಾವುದೇ ಅರ್ಜಿ ಬಂದಿಲ್ಲ ಎಂದು ಹೇಳಿ ಕೈತೊಳೆದುಕೊಂಡಿತ್ತು.
ಅಧಿಕಾರಿಗಳು ದೂರುದಾರರ ಕುಂದುಕೊರತೆ ಅರ್ಥ ಮಾಡಿಕೊಂಡು ಅರ್ಜಿ ಸ್ವೀಕರಿಸಿಲ್ಲ ಎಂದು ಹೇಳುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಆಯೋಗ ಗಮನಿಸಿದೆ. ದೂರುದಾರರು 2016ರಲ್ಲಿ ಅರ್ಜಿ ಸಲ್ಲಿಸಿದ್ದಾರೆ ಎಂದು ಆಯೋಗ ತನ್ನ ಆದೇಶದಲ್ಲಿ ತಿಳಿಸಿದೆ.
ದೂರುದಾರರಿಗೆ ಮತ್ತೊಮ್ಮೆ ಅರ್ಜಿ ಕೇಳುವುದು ಮಾನವೀಯವಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.