ಕಾಸರಗೋಡು: ಜಿಲ್ಲೆಯ ಸಮಾಜಿಕ, ಸಾಂಸ್ಕøತಿಕ ಸಂಸ್ಥೆ ರಂಗಚಿನ್ನಾರಿ ಕಾಸರಗೋಡು ಇದರ ಸಹ ಸಂಸ್ಥೆ ಮಹಿಳಾ ಘಟಕ ನಾರಿ ಚಿನ್ನಾರಿ, ಸಂಗೀತ ಘಟಕ ಸ್ವರ ಚಿನ್ನಾರಿ ನೇತೃತ್ವದಲ್ಲಿ ಭಕ್ತಿ ಭಾವಗೀತೆಗಳ ಕಲಿಕಾ ಕಾರ್ಯಾಗಾರ ಸೆ. 29ರಂದು ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ 'ಕಣ್ವ ಮಂಟಪ'ದಲ್ಲಿ ಜರುಗಲಿದೆ.
ಬೆಂಗಳೂರಿನ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಕಾರದೊಂದಿಗೆ ಕಾರ್ಯಕ್ರಮ ನಡೆಯುವುದು. ಅಂತಾರಾಷ್ಟ್ರೀಯ ಖ್ಯಾತಿಯ ಗಾಯಕ ಶಂಕರ್ ಶ್ಯಾನುಭಾಗ್ ಅವರ ಸಂಗೀತ ನಿರ್ದೇಶನದೊಂದಿಗೆ 'ಭಕ್ತಿ ರಸ'ಹೆಸರಿನಲ್ಲಿ ಕಲಿಕಾ ಕಾರ್ಯಾಗಾರ ನಡೆಯಲಿದೆ. ಬೆಳಗ್ಗೆ 9.30ರಿಂದ ಸಂಜೆ 5ರ ವರೆಗೆ ಕಾರ್ಯಾಗಾರ ನಡೆಯಲಿರುವುದು.