ಶ್ರೀನಗರ: ಕಾಶ್ಮೀರದ ಶ್ರೀನಗರ, ಬುದ್ಗಾಮ್ ಮತ್ತು ಗಂದರ್‌ಬಾಲ್ ಜಿಲ್ಲೆಗಳ 15 ವಿಧಾನಸಭಾ ಕ್ಷೇತ್ರಗಳು ಮತ್ತು ಜಮ್ಮುವಿನ 11 ವಿಧಾನಸಭಾ ಕ್ಷೇತ್ರಗಳಲ್ಲಿ ಬುಧವಾರ ನಡೆದ ಎರಡನೇ ಹಂತದ ಮತದಾನವು 2014ರ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಶೇ 10ರಷ್ಟು ಕುಸಿತವಾಗಿದೆ.
ಶ್ರೀನಗರ: ಕಾಶ್ಮೀರದ ಶ್ರೀನಗರ, ಬುದ್ಗಾಮ್ ಮತ್ತು ಗಂದರ್‌ಬಾಲ್ ಜಿಲ್ಲೆಗಳ 15 ವಿಧಾನಸಭಾ ಕ್ಷೇತ್ರಗಳು ಮತ್ತು ಜಮ್ಮುವಿನ 11 ವಿಧಾನಸಭಾ ಕ್ಷೇತ್ರಗಳಲ್ಲಿ ಬುಧವಾರ ನಡೆದ ಎರಡನೇ ಹಂತದ ಮತದಾನವು 2014ರ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಶೇ 10ರಷ್ಟು ಕುಸಿತವಾಗಿದೆ.
ಕಳೆದ ಏಪ್ರಿಲ್, ಮೇ ತಿಂಗಳಲ್ಲಿ ನಡೆದ ಲೋಕಸಭಾ ಚುನಾವಣೆ, ಸ್ಥಳೀಯ ರಾಜಕೀಯ ಚಟುವಟಿಕೆಗಳಿಂದ ಮತದಾರರಲ್ಲಿ ಉತ್ಸಾಹ ಹೆಚ್ಚಾಗಿದ್ದರಿಂದ ಉತ್ತಮ ಮತದಾನವನ್ನು ನಿರೀಕ್ಷಿಸಲಾಗಿತ್ತು. ಆದರೆ ಅಚ್ಚರಿ ಎಂಬಂತೆ ಕಳೆದ ಬಾರಿಗಿಂತ ಮತದಾನ ಕಡಿಮೆಯಾಗಿದೆ.
ಚುನಾವಣಾ ಆಯೋಗದ ಅಂಕಿ ಅಂಶಗಳ ಪ್ರಕಾರ ಶ್ರೀನಗರ, ಬುದ್ಗಾಮ್ ಮತ್ತು ಗಂದರ್‌ಬಾಲ್‌ನಲ್ಲಿ ಶೇ 48.27ರಷ್ಟು ಮತದಾನವಾಗಿದ್ದರೆ, 2014ರಲ್ಲಿ ಇಲ್ಲಿ ಶೇ 57.01ರಷ್ಟು ಮತದಾನವಾಗಿತ್ತು. ಶ್ರೀನಗರ ಜಿಲ್ಲೆಯ ಎಂಟು ಕ್ಷೇತ್ರಗಳಲ್ಲಿ ಈ ಬಾರಿ ಶೇ 27.03ರಷ್ಟು ಮತದಾನವಾಗಿದ್ದರೆ, 2014ರಲ್ಲಿ ಶೇ 27.9ರಷ್ಟು ಮತದಾನವಾಗಿತ್ತು. ಅಂತೆಯೇ 2014ರಲ್ಲಿ ಬುದ್ಗಾಮ್ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಶೇ 74.2ರಷ್ಟು ಮತನಾವಾಗಿತ್ತು. ಅದು ಈ ಬಾರಿ ಶೇ 58.97ಕ್ಕೆ ಕುಸಿದಿದೆ. ಅಂದರೆ ಶೇ 16ರಷ್ಟು ಕುಸಿತವಾಗಿದೆ. ಗಂದರ್‌ಬಾಲ್ ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ 2014ರಲ್ಲಿ ಶೇ 68.95ರಷ್ಟು ಮತದಾನವಾಗಿತ್ತು. ಇಲ್ಲಿ ಈ ಬಾರಿ ಮತದಾನದ ಪ್ರಮಾಣ ಶೇ 58.81ಕ್ಕೆ ಇಳಿಕೆಯಾಗಿದೆ.
ಜಮ್ಮುವಿನ 11 ಕ್ಷೇತ್ರಗಳಲ್ಲಿ ಶೇ 68ರಿಂದ 80ರಷ್ಟು ಮತದಾನವಾಗಿದೆ. ಅದೂ 2014ರ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಶೇ 10ರಷ್ಟ ಕಡಿಮೆಯಾಗಿದೆ
ಅದಾಗ್ಯೂ ಉಗ್ರರ ಪೀಡಿತ ಜಿಲ್ಲೆಗಳಾದ ರಜೌರಿ, ಪೂಂಚ್ ಮತ್ತು ರಿಯಾಸ್ಕಿಯಲ್ಲಿ ಮತದಾನ ಪ್ರಕ್ರಿಯೆಯು ಶಾಂತಿಯುತವಾಗಿ ನಡೆದಿದೆ.
'ಕೇಂದ್ರ ಸರ್ಕಾರವು ವಿದೇಶಿ ಪ್ರತಿನಿಧಿಗಳನ್ನು ಕರೆತರುವ ಮೂಲಕ ಶ್ರೀನಗರದಲ್ಲಿ ಸಾಮಾನ್ಯ ಸ್ಥಿತಿ ನೆಲೆಸಿದೆ ಎಂಬುದನ್ನು ಬಿಂಬಿಸುವ ಯತ್ನ ನಡಸಿತ್ತು. ಅಲ್ಲದೆ ಹೆಚ್ಚು ಮತದಾನ ನಡೆಯುವುದನ್ನು ತೋರಿಸಬಯಸಿತ್ತು. ಆದರೆ ಇಲ್ಲಿನ ಜನರು ಕಡಿಮೆ ಮತ ಚಲಾಯಿಸಿದ್ದಾರೆ. ಈ ಮೂಲಕ ಅವರು ಸಂವಿಧಾನದ 370ನೇ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ್ದನ್ನು ವಿರೋಧಿಸಿದ್ದಾರೆ' ಎಂದು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ತಿಳಿಸಿದರು.