ಕುಂಬಳೆ: ದೇಶದ ಕರಾವಳಿಯಾದ್ಯಂತ ನಡೆಯುವ ಸಾಗರತೀರ ಸ್ವಚ್ಛ ಗೊಳಿಸುವ `ಸ್ವಚ್ಛ ಸಾಗರ ಸುರಕ್ಷಿತ ಸಾಗರ' ಅಭಿಯಾನದ ಅಂಗವಾಗಿ ಪ್ರಕೃತಿ ಸಂರಕ್ಷಣಾ ಸಮಿತಿ ಕಾಸರಗೋಡು ಇದರ ಕಾರ್ಯಕರ್ತರು ಕುಂಬಳೆ ಕೊಯಿಪ್ಪಾಡಿ ಕಡಲತೀರದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು.
ಮತ್ರ್ಸಪ್ರವರ್ತಕ ಸಂಘದ ವಿನೋದ್ ಕುಂಬಳೆ, ಪ್ರಕೃತಿ ಸಂರಕ್ಷಣಾ ಸಮಿತಿಯ ಬಾಲಕೃಷ್ಣ ಏಣಿಯರ್ಪು, ಜಗದೀಶ್ ಚಂದ್ರ ಕುತ್ತಾಜೆ, ನವೀನ್ ಏಣಿಯರ್ಪು ಮುಂತಾದವರು ನೇತೃತ್ವ ವಹಿಸಿದರು.