ಬದಿಯಡ್ಕ: ವಾಂತಿಚ್ಚಾಲು ಉಪ್ಲೇರಿ ಶ್ರೀ ಮಂತ್ರಮೂರ್ತಿ ಗುಳಿಗ ಸೇವಾಟ್ರಸ್ಟ್‍ನ ನೇತೃತ್ವದಲ್ಲಿ ಶ್ರೀ ಗುಳಿಗ ದೈವದ ಆದಿಮೂಲ ಬನ ಸ್ಥಳದ (ಅಟ್ಟೆಪ್ಪಾಡಿ ಕಲ್ಲು) ಜೀರ್ಣೋದ್ಧಾರದ ವಿಷಯದಲ್ಲಿ ಅಷ್ಟಮಂಗಲ ಸ್ವರ್ಣ ಪ್ರಶ್ನಾಚಿಂತನೆ ದೈವಜ್ಞ ಜ್ಯೋತಿಷ್ಯ ತಿಲಕಂ ಶಶಿಧರನ್ ಮಾಂಗಾಡ್ ಹಾಗೂ ದೈವಜ್ಞ ಸಾಮ್ರಾಟ್ ರಾಜೇಶ್ ಎರಿಯ, ದೈವಜ್ಞ ಕೇಶವ ಭಟ್ ನೆಲ್ಲಿಕ್ಕಳೆಯ, ಸೂರಜ್ ನೀಲೇಶ್ವರ ಇವರ ನೇತೃತ್ವದಲ್ಲಿ ಟ್ರಸ್ಟಿನ ಅಧ್ಯಕ್ಷ ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ಇವರ ಉಪಸ್ಥಿತಿಯಲ್ಲಿ ನಡೆಯಿತು.
ಕಾರಣಿಕದಾಯಕವೂ, ಪ್ರಾರ್ಥನಾ ವರದಾಯಕನೂ ಆದÀ ಶ್ರೇಷ್ಠ ಶಕ್ತಿಚೈತನ್ಯವಾದ ಉಪ್ಲೇರಿ ಮಂತ್ರಮೂರ್ತಿ ಗುಳಿಗ ಸನ್ನಿಧಿಯಲ್ಲಿ ಹಲವರ ಪ್ರಾರ್ಥನೆಯ ಇಷ್ಟಾರ್ಥ ಸಿದ್ಧಿಯಾಗಿದೆ. 543 ವರ್ಷಗಳ ಇತಿಹಾಸವಿರುವ ಈ ಸನ್ನಿಧಿಯ ಮೂಲಬನ ಸ್ಥಳವು ಕಳೆದ 40 ವರ್ಷಗಳಿಂದ ಅನ್ಯಾಧೀನವಾಗಿದ್ದ ಹಿನ್ನೆಲೆಯಲ್ಲಿ ರಸ್ತೆಯ ಬದಿಯಲ್ಲೇ ಗುಳಿಗನನ್ನು ಆರಾಧಿಸಿಕೊಂಡು ಬರಲಾಗುತ್ತಿತ್ತು. ಪ್ರಸ್ತುತ ಮೂಲಬನಸ್ಥಳವನ್ನು ಖರೀದಿಸಿದ ಕೊಡುಗೈದಾನಿ ಕುಳೂರು ಕನ್ಯಾನ ಸದಾಶಿವ ಶೆಟ್ಟಿ ಅವರು ಟ್ರಸ್ಟಿಗೆ ದಾನರೂಪದಲ್ಲಿ ನೀಡಿದ್ದರು. ಮುಂದಿನ ಕಾರ್ಯಗಳ ಕುರಿತು ಚಿಂತಿಸುವುದಕ್ಕಾಗಿ ಅಷ್ಟಮಂಗಲ ಪ್ರಶ್ನೆ ಇರಿಸಲಾಯಿತು. ಮೇನೇಜಿಂಗ್ ಟ್ರಸ್ಟಿ ಪ್ರಧಾನಕರ್ಮಿ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲು, ನಿರ್ದೇಶಕ ಡಾ. ಶ್ರೀನಿಧಿ ಸರಳಾಯ ಬದಿಯಡ್ಕ, ಗೋಪಾಲಕೃಷ್ಣ ಪೈ ಬದಿಯಡ್ಕ, ಜಗನ್ನಾಥ ರೈ ಕೊರೆಕ್ಕಾನ, ಗೌರವ ಸಲಹೆಗಾರ ಕೃಷ್ಣ ಬೆಳ್ಚಪ್ಪಾಡ ಉಪ್ಲೇರಿ, ರಾಮನಾಯ್ಕ ಕುಂಟಾಲುಮೂಲೆ, ಶಿವರಾಮ ಸಾಲ್ಯಾನ್ ವಾಂತಿಚ್ಚಾಲು, ಸಮಿತಿಯ ಆಡಳಿತ ಸಲಹಾ ಸಮಿತಿ ನಿರ್ದೇಶಕ ಸುಕುಮಾರ ಉಪ್ಲೇರಿ, ರಮೇಶ್ ನಾಯ್ಕಾಪು, ಆನಂದ ಬೈಕ್ಕುಂಜ, ತಾರಾನಾಥ ರೈ, ಸಂಜೀವ ಶೆಟ್ಟಿ ಮೊಟ್ಟೆಕುಂಜ, ಪ್ರದೀಪ್ ಕಳತ್ತೂರು, ಜಯರಾಮ ಪಾಟಾಳಿ ಪಡುಮಲೆ ಭಗವದ್ಭಕ್ತರು ಉಪಸ್ಥಿತರಿದ್ದರು.