ತಿರುವನಂತಪುರಂ: ಪತ್ರಕರ್ತೆ ಪಿ.ಎಸ್. ರಶ್ಮಿ (38) ನಿನ್ನೆ ಹಠಾತ್ ಮೃತರಾದರು. ಅವರು ಜನಯುಗಂ ಪತ್ರಿಕೆಯ ತಿರುವನಂತಪುರಂ ಬ್ಯೂರೋ ಮುಖ್ಯಸ್ಥರಾಗಿದ್ದರು.ಈರಾಟುಪೇಟೆಯ ಸ್ವಗೃಹದಲ್ಲಿ ನಿಧನರಾದರು.
ನಿನ್ನೆ ಬೆಳಗ್ಗೆ ಹಠಾತ್ ಅಸ್ವಸ್ಥಗೊಂಡಿದ್ದ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಜೀವ ಉಳಿಸಲಾಗಲಿಲ್ಲ. ಅವರ ಪತಿ, ದೀಪಕ್ ಪ್ರಸಾದ್ ಪರಪ್ರಮ್, ಟೈಮ್ಸ್ ಆಫ್ ಇಂಡಿಯಾ, ತಿರುವನಂತಪುರಂನಲ್ಲಿ ಛಾಯಾಗ್ರಾಹಕರಾಗಿದ್ದಾರೆ.
ಮೃತ ದೇಹವನ್ನು ಸೋಮವಾರ ಬೆಳಿಗ್ಗೆ 8:00 ಗಂಟೆಗೆ ಮನೆಗೆ ತರಲಾಗುವುದು. ಮಧ್ಯಾಹ್ನ 3 ಗಂಟೆಗೆ ಸ್ವಗೃಹದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.ಸಮರಸ ಸುದ್ದಿಯೊಂದಿಗೆ ನಿಕಟ ಸಂಬಂಧ ಹೊಂದಿದ್ದ ರಶ್ಮಿ ಕೇರಳ ವಲಯದ ಪ್ರಮುಖ ಸುದ್ದಿಗಳಿಗೆ ನಮ್ಮೊಂದಿಗೆ ನೆರವಾಗುತ್ತಿದ್ದರು. ಅವರ ನಿಧನಕ್ಕೆ ಸಮರಸ ಬಳಗ ತೀವ್ರ ಸಂತಾಪ ಸೂಚಿಸಿದೆ.