ಮಧೂರು: ಪರಿಶ್ರಮ ಹಾಗೂ ಬದ್ಧತೆಯಿಂದ ಯಾವ ಕಾರ್ಯವನ್ನೂ ಸಾಧಿಸಬಹುದು ಎಂದು ಕೂಟ ಮಹಾಜಗತ್ತು ಸಾಲಿಗ್ರಾಮ ಇದರ ಕಾಸರಗೋಡು ಅಂಗ ಸಂಸ್ಥೆಯ ಅಧ್ಯಕ್ಷ ಶಂಕರನಾರಾಯಣ ಮಯ್ಯ ಬದಿಯಡ್ಕ ಅಭಿಪ್ರಾಯಪಟ್ಟರು.
ಪುಳ್ಕೂರು ಕೃಷ್ಣ ಹಂದೆ ಅವರ ಮನೆಯಲ್ಲಿ ನಡೆದ ಕೂಟ ಮಹಾಜಗತ್ತು ಕಾಸರಗೋಡು ಅಂಗ ಸಂಸ್ಥೆಯ ಸಂಪರ್ಕ ಸಭೆಯಲ್ಲಿ ಕಣ್ಣೂರು ವಿಶ್ವವಿದ್ಯಾಲಯದ ಕಳೆದ ಸಾಲಿನ ಕನ್ನಡ ಬಿ.ಎ. ಪದವಿ ಪರೀಕ್ಷೆಯಲ್ಲಿ ದ್ವಿತೀಯ ರ್ಯಾಂಕ್ ಪಡೆದ ಶ್ರೀವಿದ್ಯಾ ಎಸ್.ನೀರಾಳ ಅವರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಿ ಅವರು ಮಾತನಾಡಿದರು.
ಸ್ವಂತ ಪರಿಶ್ರಮ ಮತ್ತು ದೇವರ ಕೃಪೆಯಿಂದ ಅವರಿಗೆ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಹೇಳಿದರು.
ಸಮ್ಮಾನಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಶ್ರೀವಿದ್ಯಾ ಎಸ್. ಅವರು ತಂದೆ ತಾಯಿ ಹಾಗೂ ಮನೆಯವರ ಸಹಾಯದಿಂದ ಈ ಸಾಧನೆ ಸಾಧ್ಯವಾಗಿದೆ. ನನ್ನ ಮೇಲೆ ಅಭಿಮಾನ ಇರಿಸಿ ಗೌರವಿಸಿದ ಕೂಟ ಮಹಾ ಜಗತ್ತಿಗೆ ಸದಾ ಋಣಿಯಾಗಿದ್ದೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನದ ಆಡಳಿತ ಮಂಡಳಿ ಮಾಜಿ ಸದಸ್ಯ ನೀರಾಳ ಕೃಷ್ಣ ಹೊಳ್ಳ, ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢ ಶಾಲೆಯ ನಿವೃತ್ತ ಅಧ್ಯಾಪಕ ನರಸಿಂಹ ಮಯ್ಯಎಂ. ಮಧೂರು ಹಾಗೂ ಹಿರಿಯರಾದ ಕೃಷ್ಣ ಹೆಬ್ಬಾರ್ ಪುಳ್ಕೂರು ಮುಂತಾದವರು ಉಪಸ್ಥಿತರಿದ್ದರು. ಪ್ರಭಾಕರ ಕಾರಂತ ಸ್ವಾಗತಿಸಿ, ನಿವೃತ್ತ ಅಧ್ಯಾಪಕ ಕೃಷ್ಣ ಕಾರಂತ ಬನ್ನೂರು ವಂದಿಸಿದರು.