ತಿರುವನಂತಪುರಂ: ಚುರಲ್ಮಲಾ ಭೂಕುಸಿತದಲ್ಲಿ ರಾಜ್ಯ ಸರ್ಕಾರ ಸಿದ್ಧಪಡಿಸಿರುವ ಹುಸಿ ಲೆಕ್ಕಾಚಾರ ಬಯಲಾಗಿದ್ದು, ಅನಾಹುತದ ಲಾಭ ಪಡೆಯುವ ನಡೆಯ ಬಗ್ಗೆ ಅಚ್ಚರಿಮೂಡಿಸಿದೆ.
ಓಖಿ ಚಂಡಮಾರುತ, ಪ್ರವಾಹದ ಸಮಯದಲ್ಲಿ ಮತ್ತು ಕೋವಿಡ್ ಸಮಯದಲ್ಲಿ ಪಿಣರಾಯಿ ಸರ್ಕಾರದ ಮೇಲೆ ಇದೇ ಮಾದರಿಯ ಆರೋಪ ಕೇಳಿಬಂದಿತ್ತು. ಉಚಿತವಾಗಿ ಅಂತ್ಯಸಂಸ್ಕಾರ ಮಾಡಿದ ಮೃತದೇಹಗಳಿಗೂ ಬೆಲೆ ನಿಗದಿ ಮಾಡಿರುವ ಎಡಪಕ್ಷಗಳ ಸರ್ಕಾರದ ವಿರುದ್ಧ ಸೇವಾ ಭಾರತಿ ಸೇರಿದಂತೆ ಸ್ವಯಂಸೇವಾ ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸುತ್ತಿವೆ.
ಮೃತದೇಹದ ಅಂತ್ಯಸಂಸ್ಕಾರಕ್ಕೆ 75 ಸಾವಿರ ರೂ.ವರೆಗೆ ಖರ್ಚು ಮಾಡಲಾಗಿದೆ ಎಂದು ಸರ್ಕಾರ ಹೈಕೋರ್ಟ್‍ಗೆ ಮಾಹಿತಿ ನೀಡಿದೆ. ಮತ್ತೊಂದು ಅಂದಾಜಿನ ಪ್ರಕಾರ ಸ್ವಯಂಸೇವಕರಿಗೆ ಆಹಾರ ನೀಡಲು ಸುಮಾರು 10 ಕೋಟಿ ವೆಚ್ಚವಾಗಿದೆ ಎಂದು ತಿಳಿಸಲಾಗಿದೆ. . ಮೃತರ ಡಿಎನ್ ಎ ಪರೀಕ್ಷೆವರೆಗೆ ಮೂರು ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ಅಂದಾಜುವೆಚ್ಚ ನೀಡಲಾಗಿದೆ. ಕೇಂದ್ರಕ್ಕೆ ಒಟ್ಟು 1220 ಕೋಟಿ ರೂ.ವೆಚ್ಚದ ವರದಿ ನೀಡಲಾಗಿತ್ತು. ಆರಂಭದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಸಚಿವರು ಎರಡು ಸಾವಿರ ಕೋಟಿಯ ಅಂದಾಜನ್ನು ಮುಂದಿಟ್ಟರು. ಎಂದಿನಂತೆ ಮುಖ್ಯಮಂತ್ರಿಗಳು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ವಿನಂತಿಸಿದರು. ಆದರೆ ಪರಿಹಾರ ನಿಧಿಗೆ ಹಣ ನೀಡುವ ಬದಲು ನೇರವಾಗಿ ನಿವೇಶನ, ಮನೆ ನೀಡಲು ಹಲವರು ಮುಂದಾದರು. ಮೇಲಾಗಿ, ಟೌನ್ ಶಿಪ್ ನಿರ್ಮಿಸಿ ಭೂಮಿ ಖರೀದಿಸಿ ಮನೆಗಳನ್ನು ಕೊಟ್ಟರೂ 1000 ಕೋಟಿಗಿಂತ ಕಡಿಮೆಯಿದ್ದರೆ ಸಾಕು ಎಂದು ತಜ್ಞರು ಕೂಡ ವರÀದಿ ಕೂಡಾ ನೀಡಿದ್ದರು. ಇದಕ್ಕಾಗಿಯೇ ಕೇಂದ್ರದಿಂದ ಹಣ ಪಡೆಯಲು ನಕಲಿ ಖಾತೆಗಳನ್ನು ಪರಿಚಯಿಸಲಾಗಿದೆ ಎಮದು ಹೇಳಲಾಗಿದೆ.
ಓಖಿ ಚಂಡಮಾರುತ, ಎರಡು ಪ್ರವಾಹಗಳು ಮತ್ತು ಕೋವಿಡ್ ಸಾಂಕ್ರಾಮಿಕದಂತಹ ವಿಪತ್ತುಗಳ ಸಂದರ್ಭದಲ್ಲಿ ಸರ್ಕಾರ ನಕಲಿ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. ಓಖಿ ದುರಂತಕ್ಕೆ ಕೇಂದ್ರ ನೀಡಿದ ಹಣ ಸರಿಯಾಗಿ ಬಳಕೆಯಾಗುತ್ತಿಲ್ಲ ಎಂದು ಆರೋಪಿಸಿ ಲ್ಯಾಟಿನ್ ಆರ್ಚ್‍ಡಯಾಸಿಸ್ ಮತ್ತು ಸಂತ್ರಸ್ತ ಜನರು ಪ್ರತಿಭಟಿಸಿದ್ದರು. ಪ್ರವಾಹ ಪರಿಹಾರಕ್ಕಾಗಿ ಪರಿಹಾರ ನಿಧಿಗೆ ಬಂದ ಹಣವನ್ನು ಸಿಪಿಎಂ ಬೆಂಬಲಿಗರು ಒಳಸೇರಿಸಿದ್ದಾರೆ ಎಂದು ಅಂದಾಜಿಸಲಾಗಿದೆ. . ಸಂತ್ರಸ್ತರಿಗೆ ಸರಿಯಾಗಿ ಪರಿಹಾರ ನಿಧಿ ಸಿಕ್ಕಿಲ್ಲ. ಕೋವಿಡ್ ಅವಧಿಯಲ್ಲಿ ಕೈಗವಸು ಮತ್ತು ಪಿಪಿಇ ಕಿಟ್‍ಗಳ ಖರೀದಿಯಲ್ಲಿ ಭಾರಿ ಮೊತ್ತವನ್ನು ಪಾವತಿಸಿ ಅಸ್ತಿತ್ವದಲ್ಲಿಲ್ಲದ ಕಂಪನಿಗಳಿಗೆ ಆದೇಶ ನೀಡುವ ಮೂಲಕ ಕೋಟಿಗಟ್ಟಲೆ ಭ್ರಷ್ಟಾಚಾರ ನಡೆದಿರುವುದು ಬೆಳಕಿಗೆ ಬಂದಿದೆ. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ವಿದೇಶಿ ಕಂಪನಿಗೆ ಆರೋಗ್ಯ ಮಾಹಿತಿಯನ್ನು ಒದಗಿಸಲು ಒಂದು ಕ್ರಮವನ್ನು ಕೈಗೊಳ್ಳಲಾಯಿತು. ಇಷ್ಟೆಲ್ಲ ಆದ ಮೇಲೂ ವಯನಾಡ್ ಭೂಕುಸಿತದಲ್ಲೂ ಕೋಟಿಗಟ್ಟಲೆ ಸುಳ್ಳು ಲೆಕ್ಕ ನೀಡಿ ಹಣ ಜೇಬಿಗಿಳಿಸಲಾಗುತ್ತಿದೆ ಎಂಬ ಶಂಕೆ ಬಲವಾಗಿದೆ.