ಪೆರ್ಲ: ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕ ಹಾಗೂ ಭೂಮಿತ್ರಸೇನಾ ಕ್ಲಬ್ ಜಂಟಿ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಪರಿಸರ ಆರೋಗ್ಯ ದಿನ ಆಚರಿಸಲಾಯಿತು.
ಪ್ರಾಂಶುಪಾಲ ಶಂಕರ ಖಂಡಿಗೆ ದಿನಾಚರಣೆಯ ಮಹತ್ವ ತಿಳಿಸಿ ಗಿಡ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಕಾಲೇಜು ಆವರಣದಲ್ಲಿ ಸ್ವಯಂ ಸೇವಕರು ಗಿಡ ನೆಟ್ಟು ಪರಿಸರದ ಆರೋಗ್ಯದ ಮಹತ್ವ ಸಾರಿದರು. ಭೂಮಿತ್ರಸೇನ ಕ್ಲಬ್ ಸಂಯೋಜಕ ಮನೋಜ್ ಕುಮಾರ್ ಪಿ., ಎನ್ನೆಸ್ಸೆಸ್ ಕಾರ್ಯಕ್ರಮ ಯೋಜನಾಧಿಕಾರಿ ವರ್ಷಿತ್ ಕಾರ್ಯಕ್ರಮ ಸಂಯೋಜಿಸಿದರು. ಬೋಧಕೇತರ ಸಿಬ್ಬಂದಿ ಜಯರಾಮ ಹಾಗೂ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.