ಬದಿಯಡ್ಕ: ಹೊನ್ನಾವರದಿಂದ ಬಂದು ಕಾಸರಗೋಡಿನಲ್ಲಿ ನೆಲೆಸಿದ ಎಸ್.ವಿ ಭಟ್ಟರು ಕಾಸರಗೋಡು ಜಿಲ್ಲೆಯಲ್ಲಿ ನಡೆಸಿದ ಕನ್ನಡ ಸೇವೆ ಅನುಪಮವಾದದ್ದು. ಅವರ ಕನ್ನಡಾಭಿಮಾನ, ಕಾಸರಗೋಡಿನ ಕನ್ನಡಕ್ಕೆ,ಶೈಕ್ಷಣಿಕ ರಂಗಕ್ಕೆ ನೀಡಿದ ಕೊಡುಗೆ ಅಪಾರವಾದುದು. ಹೊರಗಿನಿಂದ ಬಂದು ಇಲ್ಲಿ ನಡೆಸಿದ ಕನ್ನಡ ಕೈಂಕರ್ಯ ಸದಾ ಸ್ಮರಣೀಯವಾದುದು, ಎಲ್ಲರಿಗೂ ಮಾದರಿಯಾದುದು ಎಂದು ವಿಶ್ರಾಂತ ಪ್ರಾಂಶುಪಾಲ ಡಾ.ಬೇ.ಸೀ ಗೋಪಾಲಕೃಷ್ಣ ಭಟ್ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು ಉನ್ನತ ಪ್ರೌಢಶಾಲೆಯಲ್ಲಿ ನಡೆದ ನಿವೃತ್ತ ಉಪಜಿಲ್ಲಾ ಶಿಕ್ಷಣಾಧಿಕಾರಿಗಳೂ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ನಿಕಟಪೂರ್ವ ಅಧ್ಯಕ್ಷರೂ ಆಗಿದ್ದ ಎಸ್. ವಿ ಭಟ್ ಅವರ ಸಂಸ್ಮರಣೆ ಮಾಡಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯ ಪ್ರಕಾಶ್‍ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದ್ದರು. ಎಸ್ ವಿ ಭಟ್ ಅವರು ನಡೆಸಿದ ಕನ್ನಡ ಚಟುವಟಿಕೆಗಳು, ಅವರ ಕನ್ನಡ ಪ್ರೀತಿ ಸಾಹಿತ್ಯ ಪರಿಷತ್ತಿಗೆ ಸದಾ ದಾರಿದೀಪವಾಗಿದೆ ಎಂದು ಅವರು ಹೇಳಿದರು.
ಕರ್ನಾಟಕ ಸಮಿತಿ ಅಧ್ಯಕ್ಷ ನ್ಯಾಯವಾದಿ ಮುರಳೀಧರ ಬಳ್ಳಕ್ಕುರಾಯ, ನೀರ್ಚಾಲು ಶಾಲಾ ಪ್ರಬಂಧಕ ಜಯದೇವ ಖಂಡಿಗೆ ,ಕೇರಳ ಶಿಕ್ಷಣ ಇಲಾಖೆಯ ನಿವೃತ್ತ ಕಾರ್ಯದರ್ಶಿ ಗೋಪಾಲಕೃಷ್ಣ ಭಟ್, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕುಂಬಳೆ ಉಪಜಿಲ್ಲಾಧ್ಯಕ್ಷ ಡಾ. ಶ್ರೀಶ ಕುಮಾರ ಪಂಜಿತಡ್ಕ, ಪೆರ್ಲ ಸತ್ಯನಾರಾಯಣ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಶಿವಕುಮಾರ.ಕೆ, ನೀರ್ಚಾಲು ಪ್ರೌಢಶಾಲಾ ಮುಖ್ಯ ಶಿಕ್ಷಕ ಶಿವಪ್ರಕಾಶ್ ಎಂ.ಕೆ, ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತಡ್ಕ, ಸಾಹಿತಿ ಡಾ .ಪ್ರಮೀಳಾ ಮಾಧವ, ವಿ.ಬಿ ಕುಳಮರ್ವ, ಜಯ ನಾರಾಯಣ ತಾಯನ್ನೂರು ಮೊದಲಾದವರು ಎಸ್ ವಿ. ಭಟ್ ಅವರ ಒಡನಾಟದ ಸವಿ ನೆನಪುಗಳನ್ನು ಮೆಲುಕು ಹಾಕಿದರು.
ಎಸ್.ವಿ ಭಟ್ ಅವರ ಭಾವಚಿತ್ರಕ್ಕೆ ಪುμÁ್ಪರ್ಚನೆ ನಡೆಯಿತು. ಕಸಾಪ ಸಂಘಟನಾ ಕಾರ್ಯದರ್ಶಿ ರಾಮಚಂದ್ರ ಭಟ್ ಧರ್ಮತ್ತಡ್ಕ, ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಅಧ್ಯಕ್ಷ ಪೆÇ್ರ. ಪಿ .ಎನ್ ಮೂಡಿತ್ತಾಯ ,ಡಾ .ಕೆ. ಕಮಲಾಕ್ಷ ,ಡಾ . ಮಹೇಶ್ವರಿ .ಯು ,ಡಾ. ರತ್ನಾಕರ ಮಲ್ಲಮೂಲೆ, ಸಾಹಿತಿ ವೈ. ಸತ್ಯನಾರಾಯಣ ಕಾಸರಗೋಡು, ಬಿ. ರಾಮಮೂರ್ತಿ, ಬಾಲ ಮಧುರಕಾನನ, ಶಿವರಾಮ ಪಿ.ವಿ, ಶ್ಯಾಮಪ್ರಸಾದ್ ಕುಲಮರ್ವ , ಸುಕುಮಾರ ಆಲಂಪಾಡಿ, ಶಶಿಕಲಾ ಕಾಞಂಗಾಡು ನ್ಯಾಯವಾದಿ ಥೋಮಸ್ ಡಿ'ಸೋಜ, ಮೊಹಮ್ಮದಾಲಿ, ಸುಬ್ರಹ್ಮಣ್ಯ ಭಟ್, ಉದನೇಶವೀರ,ಸುಂದರ ಬಾರಡ್ಕ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡರು. ಕಸಾಪ ಗಡಿನಾಡ ಘಟಕದ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಸ್ವಾಗತಿಸಿ, ನಿವೃತ್ತ ಶಿಕ್ಷಕಿ ವಾಣಿ ಪಿ. ಎಸ್ ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಬೇಳ ವಂದಿಸಿದರು.