ತಿರುವನಂತಪುರಂ: ತಮಿಳು ಗಾಯಕಿ ಸುಚಿತ್ರಾ ತಮ್ಮ ವಿರುದ್ಧ ಮಾಡಿರುವ ಆರೋಪ ಆಧಾರರಹಿತವಾಗಿದೆ. ಆದ್ದರಿಂದ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವುದಾಗಿ ರೀಮಾ ಕಲ್ಲಿಂಗಲ್ ಮಂಗಳವಾರ(ಸೆಪ್ಟೆಂಬರ್ 3) ಹೇಳಿದ್ದಾರೆ.
ರೀಮಾ ಡ್ರಗ್ಸ್ ಪಾರ್ಟಿ ಮಾಡುತ್ತಾರೆ. ಅವರನ್ನು ಡ್ರಗ್ಸ್ ಪ್ರಕರಣದಲ್ಲಿ ಬಂಧನ ಮಾಡಿರುವ ಸುದ್ದಿಯನ್ನು ನಾನು ಓದಿದ್ದೇನೆ ಎಂದು ಸುಚಿತ್ರಾ ಆಧಾರರಹಿತ ಹೇಳಿಕೆ ನೀಡಿದ್ದು ನನ್ನ ಗಮನ ಸೆಳೆದಿದೆ.
ನಿಮ್ಮಲ್ಲಿ ಅನೇಕರು WCC ಮತ್ತು ಅದರ ಉದ್ದೇಶಕ್ಕಾಗಿ ವರ್ಷಗಳಿಂದ ನಿಂತಿದ್ದೀರಿ. ಈ ಬೆಂಬಲ ಮತ್ತು ನಂಬಿಕೆಯೇ ಈ ಪೋಸ್ಟ್ ಮಾಡಲು ನನ್ನನ್ನು ಪ್ರೇರೇಪಿಸಿತು. ತಮಿಳು ಗಾಯಕಿ ಸುಚಿತ್ರಾ ಇತ್ತೀಚೆಗೆ ನೀಡಿರುವ ಸಂದರ್ಶನದಲ್ಲಿ ಕೆಲವು ಹೇಳಿಕೆಗಳನ್ನು ನೀಡಿದ್ದಾರೆ. ಅದನ್ನು ಸುದ್ದಿವಾಹಿನಿಗಳು ವರದಿ ಮಾಡಿವೆ. 30 ನಿಮಿಷಗಳ ಸುದೀರ್ಘ ಸಂದರ್ಶನದಲ್ಲಿ, 2017ರ ಅತ್ಯಾಚಾರ ಸಂತ್ರಸ್ತೆಯನ್ನು ಹೆಸರಿನಿಂದ ಅವಮಾನಿಸಿದ್ದು ಮಾತ್ರವಲ್ಲದೆ, ಹೇಮಾ ಸಮಿತಿ ವರದಿಯ ಮೂಲಕ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಮಮ್ಮುಟ್ಟಿ ಮತ್ತು ಮೋಹನ್‌ಲಾಲ್ ಅವರು ಫಹಾದ್ ಫಾಜಿಲ್ ಅವರಂತಹ ನಟರ ವೃತ್ತಿಜೀವನವನ್ನು ನಾಶಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಹೇಮಾ ಸಮಿತಿ ಹೇಗೆ ಅಸ್ತಿತ್ವಕ್ಕೆ ಬಂತು ಎಂಬುದು ನಮಗೆ ಚೆನ್ನಾಗಿ ಗೊತ್ತು.
ಈ ಆಧಾರರಹಿತ ವಿಷಯಗಳು ಮುಖ್ಯವಾಹಿನಿಯ ಸುದ್ದಿಯಾಗಿಲ್ಲದಿದ್ದರೂ, ನನ್ನ ಬಗ್ಗೆ ಅವರ ಆಧಾರರಹಿತ ಹೇಳಿಕೆಗಳು ನನ್ನ ಗಮನ ಸೆಳದಿದೆ. ಅವರು ಹೇಳಿರುವಂತಹ ಘಟನೆ ಯಾವುದು ನಡೆದಿಲ್ಲ ಎಂದು ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಮಾಡಿರುವ ಪೋಸ್ಟ್ನಲ್ಲಿ ತಿಳಿಸಿದ್ದಾರೆ.