ಕೊಚ್ಚಿ: ಚಿತ್ರರಂಗದಲ್ಲಿ ನೀತಿ ಸಂಹಿತೆಯನ್ನು ಜಾರಿಗೆ ತರಲು ವುಮೆನ್ ಇನ್ ಸಿನಿಮಾ ಕಲೆಕ್ಟಿವ್(ಡಬ್ಲ್ಯುಸಿಸಿ) ಸಲಹೆಗಳನ್ನು ಮುಂದಿಟ್ಟಿದೆ.
ಹೇಮಾ ಸಮಿತಿಯ ಶಿಫಾರಸುಗಳನ್ನು ಪರಿಗಣಿಸಿ ಮಲಯಾಳಂ ಚಲನಚಿತ್ರೋದ್ಯಮವನ್ನು ಎಲ್ಲರಿಗೂ ಸಮಾನ ಮತ್ತು ಸುರಕ್ಷಿತ ಕೆಲಸದ ಸ್ಥಳವಾಗಿ ಮರುನಿರ್ಮಾಣ ಮಾಡಲು ಹೊಸ ಪ್ರಸ್ತಾಪಗಳ ಸರಣಿಯನ್ನು ಮುಂದಿಡಲಾಗುತ್ತಿದೆ ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್ ನಲ್ಲಿ ತಿಳಿಸಲಾಗಿದೆ.
ಹೇಮಾ ಸಮಿತಿಯ ಪ್ರಸ್ತಾವನೆಗಳ ಹಿನ್ನೆಲೆಯಲ್ಲಿ ಮಲಯಾಳಂ ಚಲನಚಿತ್ರೋದ್ಯಮವನ್ನು ಎಲ್ಲರಿಗೂ ಸಮಾನ ಮತ್ತು ಸುರಕ್ಷಿತ ಕೆಲಸದ ಸ್ಥಳವಾಗಿ ಮರುನಿರ್ಮಾಣ ಮಾಡುವ ಹೊಸ ಪ್ರಸ್ತಾವನೆಗಳೊಂದಿಗೆ ನಾವು ಇಂದು ಸರಣಿಯನ್ನು ಪ್ರಾರಂಭಿಸುತ್ತಿದ್ದೇವೆ ಎಂದದು ತಿಳಿಸಿದೆ.
ಉದ್ಯಮ ಮತ್ತು ಕಾರ್ಮಿಕ ಸಂಘಟನೆಗಳ ಎಲ್ಲಾ ಸದಸ್ಯರು ಮುಕ್ತ ಮನಸ್ಸಿನಿಂದ ಮತ್ತು ಒಗ್ಗಟ್ಟಿನಿಂದ ಇದರಲ್ಲಿ ಭಾಗವಹಿಸುತ್ತಾರೆ ಎಂದು ನಾವು ಭಾವಿಸುತ್ತೇವೆ. ನಮ್ಮ ಚಲನಚಿತ್ರೋದ್ಯಮವು ಬೆಳ್ಳಿತೆರೆಯಲ್ಲಿ ಮತ್ತು ಹೊರಗೆ ಉತ್ತಮಗೊಳ್ಳಲು ಸಹಾಯ ಮಾಡಲು ಚಲನಚಿತ್ರ ನೀತಿ ಸಂಹಿತೆ ಅಗತ್ಯವೆಂದು ಡಬ್ಲ್ಯುಸಿಸಿ ಫೇಸ್‍ಬುಕ್ ಪೋಸ್ಟ್‍ನಲ್ಲಿ ಹೇಳಿದೆ.