HEALTH TIPS

ಜಾಗತಿಕವಾಗಿ ಚಿನ್ನದ ಬೆಲೆ ತೀವ್ರ ಹೆಚ್ಚಳ; ಭಾರತದಲ್ಲೂ ಏರಿಕೆ ಸಾಧ್ಯತೆ

 ವಿದೇಶಗಳಲ್ಲಿ ತೀವ್ರ ಏರಿಕೆ ಕಂಡರೂ ಭಾರತದಲ್ಲಿ ಚಿನ್ನ, ಬೆಳ್ಳಿ ಬೆಲೆ ಇಂದು ಶುಕ್ರವಾರ ಇಳಿಕೆ ಆಗಿದೆ. ಆಭರಣ ಚಿನ್ನದ ಬೆಲೆ ಇವತ್ತು ಗ್ರಾಮ್​ಗೆ 6,704 ರೂ ಆಗಿದೆ. ಅಪರಂಜಿ ಚಿನ್ನ 7,314 ರೂ ಆಗಿದೆ. ಬೆಳ್ಳಿ ಬೆಲೆ 86.40 ರೂ ಇದೆ.

ಇಂದು ಮಧ್ಯಾಹ್ನದೊಳಗೆ ಎರಡೂ ಬೆಲೆ ಭಾರತದಲ್ಲೂ ಹೆಚ್ಚಾಗುವ ನಿರೀಕ್ಷೆ ಇದೆ.

ಬೆಂಗಳೂರು, ಸೆಪ್ಟಂಬರ್ 13: ಚಿನ್ನ ಮತ್ತು ಬೆಳ್ಳಿ ಬೆಲೆಗಳೆರಡೂ ವಿದೇಶಗಳಲ್ಲಿ ತೀವ್ರ ಹೆಚ್ಚಳವಾಗಿದೆ. ಆದರೆ, ಭಾರತದಲ್ಲಿ ಈ ಎರಡೂ ಲೋಹಗಳ ಬೆಲೆ ಇಳಿದಿದೆ. ಇಂದು ಮಧ್ಯಾಹ್ನದೊಳಗೆ ಭಾರತದಲ್ಲೂ ಚಿನ್ನ, ಬೆಳ್ಳಿ ಬೆಲೆಗಳು ಏರಿಕೆ ಆಗುವ ಸಾಧ್ಯತೆ ಇದೆ. ಎಂಸಿಎಕ್ಸ್ ಬೆಲೆ ಈಗಾಗಲೇ ಜಂಪ್ ಆಗಿದೆ. ಗ್ರಾಮ್​ಗೆ 14 ರೂನಷ್ಟು ಏರಿಕೆ ಆಗಬಹುದು. ಆದರೆ, ಇಂದು ಶುಕ್ರವಾರ ಬೆಳಗ್ಗೆ 10 ಗಂಟೆಯ ವಹಿವಾಟಿನಲ್ಲಿ ಚಿನ್ನದ ಬೆಲೆ ಗ್ರಾಮ್​ಗೆ 10 ರೂನಷ್ಟು ಕಡಿಮೆ ಆಗಿರುವುದು ತಿಳಿದುಬಂದಿದೆ. ಬೆಳ್ಳಿ ಬೆಲೆ 10 ಪೈಸೆ ತಗ್ಗಿದೆ. ಅಮೆರಿಕದಲ್ಲಿ ಬಡ್ಡಿದರ ಇಳಿಕೆಯಾಗುವ ಸಾಧ್ಯತೆ ದಟ್ಟವಾಗಿರುವ ಹಿನ್ನೆಲೆಯಲ್ಲಿ ಚಿನ್ನದ ಬೆಲೆ ತೀವ್ರ ಏರಿಕೆ ಕಾಣವ ಸಂಭವವಂತೂ ಕಾಣುತ್ತಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 67,040 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 73,140 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,640 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 67,040 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 8,390 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಸೆಪ್ಟೆಂಬರ್ 13ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 67,040 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 73,140 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 864 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 67,040 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 73,140 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 839 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 67,040 ರೂ
  • ಚೆನ್ನೈ: 67,040 ರೂ
  • ಮುಂಬೈ: 67,040 ರೂ
  • ದೆಹಲಿ: 67,190 ರೂ
  • ಕೋಲ್ಕತಾ: 67,040 ರೂ
  • ಕೇರಳ: 67,040 ರೂ
  • ಅಹ್ಮದಾಬಾದ್: 67,090 ರೂ
  • ಜೈಪುರ್: 67,190 ರೂ
  • ಲಕ್ನೋ: 67,190 ರೂ
  • ಭುವನೇಶ್ವರ್: 67,040 ರೂ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 3,500 ರಿಂಗಿಟ್ (68,020 ರುಪಾಯಿ)
  • ದುಬೈ: 2,855 ಡಿರಾಮ್ (65,270 ರುಪಾಯಿ)
  • ಅಮೆರಿಕ: 780 ಡಾಲರ್ (65,470 ರುಪಾಯಿ)
  • ಸಿಂಗಾಪುರ: 1,042 ಸಿಂಗಾಪುರ್ ಡಾಲರ್ (67,310 ರುಪಾಯಿ)
  • ಕತಾರ್: 2,895 ಕತಾರಿ ರಿಯಾಲ್ (66,660 ರೂ)
  • ಸೌದಿ ಅರೇಬಿಯಾ: 2,920 ಸೌದಿ ರಿಯಾಲ್ (65,320 ರುಪಾಯಿ)
  • ಓಮನ್: 303.50 ಒಮಾನಿ ರಿಯಾಲ್ (66,180 ರುಪಾಯಿ)
  • ಕುವೇತ್: 232 ಕುವೇತಿ ದಿನಾರ್ (63,790 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 8,390 ರೂ
  • ಚೆನ್ನೈ: 9,140 ರೂ
  • ಮುಂಬೈ: 8,640 ರೂ
  • ದೆಹಲಿ: 8,640 ರೂ
  • ಕೋಲ್ಕತಾ: 8,640 ರೂ
  • ಕೇರಳ: 9,140 ರೂ
  • ಅಹ್ಮದಾಬಾದ್: 8,640 ರೂ
  • ಜೈಪುರ್: 8,640 ರೂ
  • ಲಕ್ನೋ: 8,640 ರೂ
  • ಭುವನೇಶ್ವರ್: 9,140 ರೂ

ಈ ವರ್ಷಾಂತ್ಯದೊಳಗೆ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎಂದು ತಜ್ಞರು ಅಂದಾಜು ಮಾಡಿದ್ದರು. ಆದರೆ, ವರ್ಷಾರ್ಧದಲ್ಲೇ ಬೆಲೆ ಆ ಗಡಿ ದಾಟಿ ಹೋಗಿದೆ.

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries